ಶ್ರೀ ಭಗವತೀ ಕ್ಷೇತ್ರದಲ್ಲಿ ವಿಶೇಷ ಪೂಜೆ

ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ ನಡಾವಳಿ ಉತ್ಸವದ ಪ್ರಯುಕ್ತ ಭಾನುವಾರ ಶ್ರೀ ಪುಲ್ಲೂರಾಳಿ ಭಗವತೀ ಮಾತೆಯ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ನೆರವೇರಿತು.
ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ ನಡಾವಳಿ ಉತ್ಸವದ ಪ್ರಯುಕ್ತ ಭಾನುವಾರ ಶ್ರೀ ಪುಲ್ಲೂರಾಳಿ ಭಗವತೀ ಮಾತೆಯ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ನೆರವೇರಿತು.
Published on
ಮಂಗಳೂರು: ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ ನಡಾವಳಿ ಉತ್ಸವದ ಪ್ರಯುಕ್ತ ಭಾನುವಾರ ಶ್ರೀ ಪುಲ್ಲೂರಾಳಿ ಭಗವತೀ ಮಾತೆಯ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ನೆರವೇರಿತು.
ಬೆಳಗ್ಗೆ ಭಜನಾ ಸಂಕೀರ್ತನೆ, ಮಧ್ಯಾಹ್ನ 12.30ಕ್ಕೆ ಶ್ರೀ ಪುಲ್ಲೂರಾಳಿ ಭಗವತಿ ಮಾತೆಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಬಳಿಕ ಅನ್ನ ಸಂತರ್ಪಣೆ ನೆರವೇರಿತು. ಸಂಜೆ ಭಜನಾ ಸಂಕೀರ್ತನೆ. ರಾತ್ರಿ 10ಕ್ಕೆ ಕ್ಷೇತ್ರದಲ್ಲಿ ಕೆಂಡಸೇವೆ, ಮೂರ್ತಿ ದರ್ಶನವಾಗಿ ಪ್ರಸಾದ ವಿತರಣೆ ನಡೆಯಿತು. ಬಳಿಕ ಭಂಡಾರ ಅವರೋಹಣ ನಡೆಯಿತು.
ಶನಿವಾರ ರಾತ್ರಿ ಭೇಟಿಕಳ, ಮೇಲೇರಿಗೆ ಅಗ್ನಿಸ್ಪರ್ಶ, ವೀರಸ್ತಂಭ ದರ್ಶನ ನಡೆಯಿತು. ತಡರಾತ್ರಿ ಶ್ರೀ ಭಗವತೀ ಮಾತೆಯರ ಶೋಭಾಯಾತ್ರೆ ಕ್ಷೇತ್ರದಿಂದ ಕರಂಗಲ್ಪಾಡಿಗೆ ತೆರಳಿ ಶ್ರೀ ಭಗವತೀ ಕಟ್ಟೆಯಲ್ಲಿ ಪೂಜೆಯಾಗಿ ಹಿಂದಿರುಗಿತು. ಭಾನುವಾರ ಪ್ರಾತಃಕಾಲ ಕೆಂಡ ಸೇವೆ, ಮೂರ್ತಿ ದರ್ಶನ ನಡೆಯಿತು. ಕ್ಷೇತ್ರದ ಆಚಾರಪಟ್ಟವರು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ಪುಣ್ಯಕಾರ್ಯದಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net