ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ದ.ಕ. ಉಡುಪಿ ಜಿಲ್ಲೆ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಉಪಾಧ್ಯಕ್ಷ ದತ್ತಾತ್ರೇಯ ಕಾರ್ಕಳ, ದೇವರಾಜ್ ಶೆಟ್ಟಿ ಸುರತ್ಕಲ್, ಜಿಲ್ಲಾ ಸಂಚಾಲಕ ಗೋಪಾಲ್, ಪ್ರಧಾನ ಕಾರ್ಯದರ್ಶಿ ಅಜಯ್ ಮಂಗಳೂರು, ಎಸ್‌ಕೆಪಿಎ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷ ವಾಸುದೇವ ರಾವ್, ಎಸ್‌ಕೆಪಿಎ ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ ಎನ್.ಬಂಟ್ವಾಳ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಸುರೇಶ್ ಬಿ.ಕೌಡಂಗೆ, ಬೆಳ್ತಂಗಡಿ ವಲಯ ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ.ಸುವರ್ಣ, ಎಸ್‌ಕೆಪಿಎ ಸಹಕಾರಿ ಸಂಘ ನಿರ್ದೇಶಕ ಭಾರದ್ವಾಜ್ ಉಜಿರೆ, ವಲಯ ನಿರ್ಗಮನ ಅಧ್ಯಕ್ಷೆ ಸಿಲ್ವಿಯಾ ಕೊರ್ಡೆರೋ, ಕಾರ್ಯದರ್ಶಿ ವಿಜಯ ಎಚ್.ಪ್ರಸಾದ, ನೂತನ ಅಧ್ಯಕ್ಷ ರವಿ ಪೂಜಾರಿ ನಾರಾವಿ, ಗೌರವಾಧ್ಯಕ್ಷ ವಿಲ್ಸನ್ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ ದಾಮೋದರ್ ಗುರುವಾಯನಕೆರೆ, ಕೋಶಾಧಿಕಾರಿ ಸುಜಿತ್ ರೈ ಉಪಸ್ಥಿತರಿದ್ದರು. ವಲಯ ಸ್ಥಾಪಕಾಧ್ಯಕ್ಷರಾದ ಪಾಲಾಕ್ಷ ಪಿ.ಸುವರ್ಣ ಸ್ವಾಗತಿಸಿದರು. ಜಗದೀಶ್ ಜೈನ್, ಹರ್ಷ ಬಳ್ಳಮಂಜ ನಿರೂಪಿಸಿದರು. ಕಾರ್ಯದರ್ಶಿ ದಾಮೋದರ್ ವಂದಿಸಿದರು.