ಎಲ್ಲೂ ಸಿಗದ ಪಠ್ಯ ಪುಸ್ತಕ ಎಸ್.ಎಲ್.ವಿ ಬುಕ್ಹೌಸ್ನಲ್ಲಿದೆ SLV BOOK

ಕರ್ನಾಟಕದ ಅತೀ ದೊಡ್ಡ ಪುಸ್ತಕ ಮಳಿಗೆಯ ನೂತನ ಸಂಸ್ಥೆ ಎಸ್ಎಲ್ವಿ ಬುಕ್ಹೌಸನ್ನು ಶಾಸಕ ಅಶೋಕ್ಕುಮಾರ್ ರೈ ಉದ್ಘಾಟಿಸಿದರು. ಎಸ್ಎಲ್ವಿ ಸಂಸ್ಥೆ ಮಾಲೀಕರಾದ ಹೇಮಾವತಿ ದಿವಾಕರ್ ದಾಸ್, ದಿವಾಕರ್ ದಾಸ್ ನೇರ್ಲಾಜೆ, ಪ್ರಧಾನ ವ್ಯವಸ್ಥಾಪಕ ರಾಜ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.
ಕರ್ನಾಟಕದ ಅತೀ ದೊಡ್ಡ ಪುಸ್ತಕ ಮಳಿಗೆಯ ನೂತನ ಸಂಸ್ಥೆ ಎಸ್ಎಲ್ವಿ ಬುಕ್ಹೌಸನ್ನು ಶಾಸಕ ಅಶೋಕ್ಕುಮಾರ್ ರೈ ಉದ್ಘಾಟಿಸಿದರು. ಎಸ್ಎಲ್ವಿ ಸಂಸ್ಥೆ ಮಾಲೀಕರಾದ ಹೇಮಾವತಿ ದಿವಾಕರ್ ದಾಸ್, ದಿವಾಕರ್ ದಾಸ್ ನೇರ್ಲಾಜೆ, ಪ್ರಧಾನ ವ್ಯವಸ್ಥಾಪಕ ರಾಜ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ
  • ನೆಹರು ನಗರದಲ್ಲಿ ಪುಸ್ತಕ ಮಳಿಗೆ ಶುಭಾರಂಭ

ಪುತ್ತೂರು:ಅಭಿವೃದ್ಧಿಗೆ ಪೂರಕ ಉದ್ಯಮಗಳನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಲಾಗುವುದು. ಎಲ್ಲೂ ಸಿಗದ ಪಠ್ಯ ಪುಸ್ತಕ ಎಸ್.ಎಲ್.ವಿ ಬುಕ್ಹೌಸ್ನಲ್ಲಿ ಸಿಗುತ್ತಿದೆಎಂಬುದು ಶಾಲೆ ಮಕ್ಕಳ ಅಭಿಪ್ರಾಯ. ರಾಜ್ಯದಲ್ಲಿ ೨೫೦ ಕೋಟಿ ರೂ. ವ್ಯವಹಾರ ನಡೆಸಿ ಉತ್ತಮ ರೀತಿಯಲ್ಲಿ ಬೆಳೆಯುವಂತಾಗಲಿ ಎಂದು ಶಾಸಕ ಅಶೋಕ್ಕುಮಾರ್ ರೈಹೇಳಿದರು.

ನೆಹರುನಗರದಕಾಲೇಜ್ ಗೇಟ್ ಕಟ್ಟಡದಲ್ಲಿ ಪುಸ್ತಕ ಮತ್ತು ಶೈಕ್ಷಣಿಕ ಸಾಮಗ್ರಿಗಳ ಕ್ಷೇತದಲ್ಲಿ ಬ್ರಾಂಡ್ ಕ್ರಿಯೇಟ್ ಮಾಡಿರುವ ಕರ್ನಾಟಕದ ಅತೀ ದೊಡ್ಡ ಪುಸ್ತಕ ಮಳಿಗೆಯ ನೂತನ ಸಂಸ್ಥೆ ಎಸ್.ಎಲ್.ವಿ ಬುಕ್ಹೌಸ್ ಉದ್ಘಾಟಿಸಿ ಮಾತನಾಡಿದರು.

ಅರ್ಚಕವಸಂತ್ ಕೆದಿಲಾಯ ನೇತೃತ್ವದಲ್ಲಿ ಲಕ್ಷ್ಮೀಪೂಜೆ ನೆರವೇರಿತು. ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ವೆಂಕಟರಮಣ ಆಸ್ರಣ್ಣ ದೀಪ ಬೆಳಗಿಸಿದರು. ಚೆನ್ನಮ್ಮ ಮದನ ಗೌಡ ಮೊದಲ ಖರೀದಿ ಮೂಲಕ ಎಸ್.ಎಲ್.ವಿ ಸಂಸ್ಥೆಗೆ ಚಾಲನೆನೀಡಿದರು.

ಮಳಿಗೆಆರಂಭಿಸುವಲ್ಲಿ ವಿಶೇಷ ಮತುವರ್ಜಿ ವಹಿಸಿದ ರಾಮ್ದಾಸ್ ಶೆಟ್ಟಿವಿಟ್ಲ ಅವರನ್ನು ಗೌರವಿಸಲಾಯಿತು. ದಿವ್ಯನಿಧಿ ರೈ ಎರುಂಬು ಮತ್ತುಬಳಗದವರಿಂದ ಸ್ವರ ಸಮರ್ಪಣೆ ಸಂಗೀತ ರಸಮಂಜರಿ ನಡೆಯಿತು.

ಪುತ್ತೂರುವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಪ್ರಭಾಕರ್ ಭಟ್ಕಲ್ಲಡ್ಕ, ಕರ್ನಾಟಕ ಲೋಕಸೇವಾ ಆಯೋಗ ಮಾಜಿ ಸದಸ್ಯ ಎಸ್.ಆರ್.ರಂಗಮೂರ್ತಿ, ವಿಧಾಪರಿಷತ್ ಸದಸ್ಯರು ಕಿಶೋರ್ಕುಮಾರ್ ಬೊಟ್ಯಾಡಿ,ಡಾ. ಸುರೇಶ್ ಪುತ್ತೂರಾಯ, ಮಾಜಿ ಶಾಸಕರು ಸಂಜೀವ ಮಠಂದೂರು, ಮೌರ್ಯ ರೇಣುಕಾಪ್ರಸಾದ್, ಹಿರಿಯ ವೈದ್ಯ ಡಾ.ಪ್ರಸಾದ್ ಭಂಡಾರಿ,ಪ್ರಮುಖರಾದ ಸವಣೂರು ಸೀತಾರಾಮ ರೈ, ದಯಾನಂದ ಶೆಟ್ಟಿ ಉಜಿರೆ ಮಾರ್, ಅರುಣ್ಕುಮಾರ್ ಪುತ್ತಿಲ,ರಾಜರಾಮ್ ಶೆಟ್ಟಿ ಕೋಲ್ಪೆ ಗುತ್ತು, ಮುರಳಿಕೃಷ್ಣ ಹಸಂತಡ್ಕ, ಸುಧಾನ ವಸತಿ ಶಾಲೆಯ ವಿಜಯ ಹಾರ್ವಿನ್, ಎಂಪಿಎಂ ಸ್ಕೂಲ್ ಅಧ್ಯಕ್ಷ ಎಂ.ಪಿ.ಅಬೂಬಕ್ಕರ್,ರಾಮಕುಂಜೇಶ್ವರ ವಿದ್ಯಾ ಸಂಸ್ಥೆ ಮುಖ್ಯಸ್ಥ ಸೇಸಪ್ಪ ರೈ, ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಳೆ ಪ್ರಾಂಶುಪಾಲ ಜಯರಾಮ್ ರೈ, ವಕೀಲ ಮಹೇಶ್ ಕಜೆ, ಎಸ್ಎಲ್ವಿ ಸಂಸ್ಥೆಮಾಲೀಕರಾದ ಹೇಮಾವತಿ ದಿವಾಕರ್ ದಾಸ್, ದಿವಾಕರ್ ದಾಸ್ ನೇರ್ಲಾಜೆ, ಎಸ್.ಎಲ್ .ವಿ ಬುಕ್ಹೌಸ್ ಪ್ರಧಾನ ವ್ಯವಸ್ಥಾಪಕ ರಾಜ ಅಂಚನ್ ಮತ್ತಿತರರು ಉಪಸ್ಥಿತರಿದ್ದರು. ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.

ಎಲ್ಲವೂಒಂದೇ ಸೂರಿನಡಿ

ಎಸ್ಎಲ್ವಿ ಬುಕ್ಹೌಸ್ ಮಳಿಗೆಯಲ್ಲಿ ಶಾಲಾ ಮಕ್ಕಳಿಗೆ ಬೇಕಾಗುವ ಎಲ್ಲ ಪುಸ್ತಕಗಳು, ಸ್ಟೇಷನರಿಗಳು, ಗಿಫ್ಟ್ ಐಟಂಗಳು, ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು, ಕ್ಯಾರೆಮ್ ಬೋರ್ಡ್, ಚೆಸ್ ಸೇರಿದಂತೆ ಆಟದ ಸಾಮಗ್ರಿಗಳು, ಯೋಗ ಮ್ಯಾಟ್ಗಳು ಲಭ್ಯಇವೆ. ಶುಭಾರಂಭದ ಪ್ರಯುಕ್ತ ಎಲ್ಲಾ ಗ್ರಾಹಕರ ಖರೀದಿಯಲ್ಲಿ ಶೇ.೪೦ ವರೆಗೂಡಿಸ್ಕೌಂಟ್ ಆಫರ್ ನೀಡಲಾಗಿದೆ.

"

ಎಸ್.ಎಲ್.ವಿ ಬುಕ್ಹೌಸ್ ಬೆಂಗಳೂರು, ಮೈಸೂರು ಶಿವಮೊಗ್ಗ, ಚಾಮರಾಜನಗರ, ಮೂಡುಬಿದಿರೆ, ಮಂಗಳೂರಿನ ಬಿಜೈ, ಮಾರ್ನಮಿ ಕಟ್ಟೆ, ಮೇರಿಹಿಲ್, ಕೊಡಿಯಾಲ್ಬೈಲ್ ಸೇರಿ ರಾಜ್ಯಾದ್ಯಂತ ಹಲವು ಶಾಖೆಗಳನ್ನು ತೆರೆಯುವ ಮೂಲಕ ಕರ್ನಾಟಕದಲ್ಲಿ ಅತೀ ದೊಡ್ಡ ಪುಸ್ತಕ ಮಳಿಗೆಯಾಗಿ ಬೆಳೆದು ನಿಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net