ದ.ಕನ್ನಡ ಜಿಲ್ಲೆಗೆ ಸಿದ್ದರಾಮಯ್ಯ ಕೊಡುಗೆ ಅಪಾರ ಬಿ.ರಮಾನಾಥ ರೈ

ಬಿ.ರಮಾನಾಥ ರೈ
ಬಿ.ರಮಾನಾಥ ರೈ
Published on
ಮಂಗಳೂರು: ಸಾಮಾಜಿಕ ನ್ಯಾಯ ಹಾಗೂ ಸೈದ್ಧಾಂತಿಕ ನಿಲುವನ್ನು ಅಳವಡಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀರ್ಘ ಕಾಲ ಸಿಎಂ ಆಗಿ ದಿ. ದೇವರಾಜ ಅರಸು ಅವರ ದಾರಿಯಲ್ಲೇ ರಾಜ್ಯದ ಜನರ ಸೇವೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಅವರ ಕೊಡುಗೆ ಅಮೋಘ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ವಾಹಿನಿ ಯೋಜನೆ, ರಸ್ತೆ ಅಭಿವೃದ್ಧಿ, ಜಿ.ಪಂ. ರಸ್ತೆ ಮೇಲ್ದರ್ಜೆಗೆ, ಮಿನಿ ವಿಧಾನಸೌಧ ನಿರ್ಮಾಣ, ಪ್ರಜಾಸೌಧ ನಿರ್ಮಾಣ, ಅಂಬೇಡ್ಕರ್ ಭವನ, ಕೊಯಿಲದಲ್ಲಿ ಪಶುವೈದ್ಯಕೀಯ ಕಾಲೇಜು ನಿರ್ಮಾಣ, ಹೊಸ ತಾಲೂಕು,ಗ್ರಾಮ ಪಂಚಾಯಿತಿಗಳ ರಚನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ರೂವಾರಿಯಾಗಿದ್ದಾರೆ ಎಂದರು.
ಅವರ ಜಪಪರ ಕೆಲಸ ಒಪ್ಪುವಂತದ್ದು. ಪ್ರಣಾಳಿಕೆಯಲ್ಲಿ ನೀಡಿದ ಶೇ.95ಕ್ಕೂ ಅಧಿಕ ಭರವಸೆ ಈಡೇರಿಸಿದ ಸಿದ್ದರಾಮಯ್ಯ ಅವರ ಹಲವು ಕಾರ್ಯಕ್ರಮಗಳು ಇಂದಿಗೂ ಮೆಚ್ಚುಗೆ ಪಡೆದುಕೊಂಡಿದೆ. ಸಿದ್ದರಾಮಯ್ಯ ಅವರ ಮುಖ್ಯಮಂತ್ರಿಯ ಎರಡನೇ ಅವಧಿಯಲ್ಲಿ ಜಿಎಸ್‌ಟಿ ಪಾಲು ಕೇಂದ್ರಕ್ಕೆ ಹೋಗುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರದ ಅಸಹಾಯಕತೆಯ ನಡುವೆಯೂ ಗ್ಯಾರಂಟಿ ಅನುಷ್ಟಾನದ ಮೂಲಕ ಜನ ಮೆಚ್ಚುವ ಕೆಲಸ ಮಾಡಿದ್ದಾರೆ. ಅಕ್ಕಿ ನೀಡಲು ಕೇಂದ್ರ ನಿರಾಕರಿಸಿದ ಸಂದರ್ಭದಲ್ಲಿ ಅಕ್ಕಿ ಬದಲು ಹಣ ನೀಡುವ ನಿರ್ಧಾರ ಕೈಗೊಂಡಿದ್ದಾರೆ ಎಂದರು.
ಆಹಾರ ಭದ್ರತೆ ಕಾಯ್ದೆ ಅನುಷ್ಠಾನಗೈದ ಮೊದಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ನಿಲ್ಲುತ್ತಾರೆ. ವಿದ್ಯಾಸಿರಿ, ಗುತ್ತಿಗೆಯಲ್ಲಿ ಮೀಸಲಾತಿ, ಕಾಲನಿ ಅಭಿವೃದ್ಧಿಯಂತ ಜನಪರ ಕಾರ್ಯ ಮಾದರಿಯಾದದ್ದು. ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಆಡಳಿತಾವಧಿ ಅವರದ್ದಾಗಿದೆ ಎಂದರು.
ಗುರುಪುರ ಬ್ಲಾಕ್ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಮುಖಂಡರಾದ ಇಬ್ರಾಹೀಂ ನವಾಝ್, ಎಸ್.ಅಪ್ಪಿ, ಅಬ್ಬಾಸ್ ಅಲಿ, ಸುದರ್ಶನ್ ಜೈನ್, ದಿನೇಶ್ ಮುಳೂರು, ಮುಖಂಡರಾದ ವಿಕಾಸ್ ಶೆಟ್ಟಿ. ಟಿ.ಕೆ.ಸುಧೀರ್, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಶಬೀರ್ ಸಿದ್ದಕಟ್ಟೆ, ಯೋಗಿಶ್ ಕುಮಾರ್, ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net