ಬೆಳೆ ಸಮೀಕ್ಷೆಯಲ್ಲಿ ಪಿಆರ್‌ಒಗಳ ಪಾತ್ರ ಪ್ರಮುಖ : ಸಿದ್ದಕಟ್ಟೆ ಸಹಕಾರ ಸಂಘ ಅಧ್ಯಕ್ಷ ಪ್ರಭಾಕರ ಪ್ರಭು ಶ್ಲಾಘನೆ

ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಬೆಳೆ ಸಮೀಕ್ಷೆ ಪಿಆರ್‌ಒಗಳನ್ನು ಗೌರವಿಸಲಾಯಿತು.
ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಬೆಳೆ ಸಮೀಕ್ಷೆ ಪಿಆರ್‌ಒಗಳನ್ನು ಗೌರವಿಸಲಾಯಿತು.
Published on

ಬಂಟ್ವಾಳ: ಅತಿವೃಷ್ಟಿ, ಅನಾವೃಷ್ಟಿ ಹಾಗೂ ನಿರಂತರ ಮಳೆಯಿಂದಾಗಿ ಅಡಕೆ ಬೆಳೆ ಮತ್ತು ಕರಿಮೆಣಸು ಬೆಳೆಗಳು ವಿವಿಧ ರೋಗಗಳಿಂದ ಬಾಧಿತವಾಗಿ ರೈತರಿಗೆ ನಷ್ಟ ಉಂಟಾದಾಗ ರೈತರಿಗೆ ಪರಿಹಾರ ನೀಡಿ ಕೃಷಿಕರ ಬಾಳಿಗೆ ವರದಾನವಾಗಿರುವ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಗರಿಷ್ಠ ಪರಿಹಾರ ರೈತರಿಗೆ ದೊರಕಿಸುವಲ್ಲಿ ಕೃಷಿ ಇಲಾಖೆಯಿಂದ ನಿಯೋಜಿಸಲ್ಪಟ್ಟ ಬೆಳೆ ಸಮೀಕ್ಷೆ ಪಿಆರ್‌ಒಗಳ ಪಾತ್ರ ಪ್ರಮುಖವಾಗಿದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಹೇಳಿದರು.

ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಬಿ.ಕೃಷ್ಣ ರೈ ರೈತ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಘದ ವ್ಯಾಪ್ತಿಯ ಒಳಪಟ್ಟ ಗ್ರಾಮಗಳ, ಬೆಳೆ ಸಮೀಕ್ಷೆ ಪಿಆರ್‌ಒಗಳನ್ನು ಗೌರವಿಸಿ ಮಾತನಾಡಿದರು.

ಉಪಾಧ್ಯಕ್ಷ ಸಂದೇಶ ಶೆಟ್ಟಿ, ನಿರ್ದೇಶಕರಾದ ಸತೀಶ್ ಪೂಜಾರಿ, ದಿನೇಶ್ ಪೂಜಾರಿ, ರಶ್ಮಿತ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ವಿಶ್ವನಾಥ ಶೆಟ್ಟಿಗಾರ್, ವೀರಪ್ಪ ಪರವ, ಜಾರಪ್ಪ ನಾಯ್ಕ, ಶಿವ ಗೌಡ, ಪುಷ್ಪಲತಾ ಎಸ್.ಆರ್., ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ, ನವೀನ ಹೆಗ್ಡೆ, ಬೆಳೆ ಸಮೀಕ್ಷೆ ಗ್ರಾಮ ನಿವಾಸಿಗಳಾದ ಕಾರ್ತಿಕ್ ನಾಯಕ್, ಪೂಜಾ, ಭವ್ಯಶೋಭಾ, ನಮಿತಾ ಅಕ್ಷತಾ, ಲಕ್ಷ್ಮೀ, ಭಾರತಿ ಶೆಟ್ಟಿ, ಹೇಮಾವತಿ, ಪುಷ್ಪಾ ಮೊದಲಾದವರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ ಸ್ವಾಗತಿಸಿದರು. ಸಿಬ್ಬಂದಿ ಸುಭಾಸ್ ಬಂಗೇರ ನಿರೂಪಿಸಿದರು. ನಿರ್ದೇಶಕಿ ಮಂದಾರತಿ ಎಸ್.ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net