_1767877893247.webp?w=480&auto=format%2Ccompress&fit=max)
_1767877893247.webp?w=480&auto=format%2Ccompress&fit=max)
ಮೂಡುಬಿದಿರೆ: ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಬುಧವಾರ ಮೂಡುಬಿದಿರೆ ಕೋ-ಆಪರೇಟಿವ್ ಸರ್ವಿಸ್ ಸೊಸೈಟಿಗೆ ಭೇಟಿ ನೀಡಿದರು.
ಸೊಸೈಟಿ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಮಾಜಿ ಸಚಿವ, ಸೊಸೈಟಿ ನಿರ್ದೇಶಕ ಕೆ.ಅಭಯಚಂದ್ರ ಜೈನ್, ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ. ಅವರು ಸ್ವಾಮೀಜಿ ಅವರನ್ನು ಬರಮಾಡಿಕೊಂಡರು.
ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಪರ್ಯಾಯ ಎಂದರೆ ಕೇವಲ ಉತ್ಸವವಲ್ಲ, ಅದು ಭಗವಂತನ ಪೂಜೆ ಮಾಡುವ ಪವಿತ್ರ ಅವಕಾಶ. ಶ್ರೀಕೃಷ್ಣನ ಸೇವೆ ಮಾಡುವ ಪ್ರತಿಯೊಬ್ಬರೂ ಯಜಮಾನರೇ ಆಗಿರುತ್ತಾರೆ. ಅಂತಹ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಎಲ್ಲರೂ ಜೀವನದಲ್ಲಿ ದೊಡ್ಡವರಾಗಿ ಬೆಳೆಯಲಿ ಎಂದರು.
ಪ್ರಮುಖರಾದ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ಕೆ.ಶ್ರೀಪತಿ ಭಟ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ್ ಎಂ., ಸೊಸೈಟಿ ಉಪಾಧ್ಯಕ್ಷ ಗಣೇಶ್ ನಾಯಕ್, ಕಾರ್ಯದರ್ಶಿ ರಘುವೀರ್ ಕಾಮತ್, ಮಠದ ಭಕ್ತರು , ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.