ಹಿಂದು ಧರ್ಮಕ್ಕೆ ಸಿಗಲಿ ಸಂಘಟನೆ ಬಲ : ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಶಯ

ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ಹಾಗೂ ಶ್ರೀ ದುರ್ಗಾ ಗಣೇಶ ಸಭಾಭವನ ಲೋಕಾರ್ಪಣೆ ಕಾರ್ಯಕ್ರಮ ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು.
ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ಹಾಗೂ ಶ್ರೀ ದುರ್ಗಾ ಗಣೇಶ ಸಭಾಭವನ ಲೋಕಾರ್ಪಣೆ ಕಾರ್ಯಕ್ರಮ ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು.
Published on

ಭಜನೆ ನಮ್ಮ ಪರಂಪರೆಯಾಗಿದ್ದು, ಇದರಲ್ಲಿ ಧರ್ಮದ ಮೂಲತತ್ವ ಕಾಣುತ್ತದೆ. ಭಜನೆ ಮೂಲಕ ಏಕತೆ ಮೂಡುತ್ತದೆ. ನಮ್ಮ ದೇಗುಲಗಳ ಅಭಿವೃದ್ಧಿ ಹಾಗೂ ರಕ್ಷಣೆಗೆ ಪಣತೊಟ್ಟು ಕೆಲಸ ಮಾಡಬೇಕು. ಭಾರತದಲ್ಲಿ ಶಾಶ್ವತವಾಗಿರುವುದು ಇಲ್ಲಿನ ಪರಂಪರೆ. ಇದರ ಅರಿವು ಸಮಸ್ತ ಭಾರತೀಯರಲ್ಲಿ ಮೂಡಿಬರಬೇಕು.

ಭಾರತೀಯ ಮಣ್ಣಿನ ಕಣಕಣದಲ್ಲೂ ದೇವರಿದ್ದಾನೆ. ವಿಶ್ವದಲ್ಲಿ ಹಿಂದು ಸಮಾಜದ ಒಂದೇ ಭೂಮಿ ಎಂದರೆ ಅದು ಭಾರತ. ಮಕ್ಕಳಿಗೆ ಧಾರ್ಮಿಕ ಚಿಂತನೆಗಳನ್ನು ನೀಡುವ ಮೂಲಕ ದೇಶ ಕಟ್ಟುವ ಕೆಲಸಕ್ಕೆ ಪ್ರೇರಣಾ ಶಕ್ತಿಯಾಗುವಂತೆ ಪಾಲಕರು ಅರಿವು ಮೂಡಿಸುವುದು ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net