ಗೃಹಿಣಿ ಕಳುಹಿಸಿರುವ ದೂರಿನ ಬಗ್ಗೆ 2025 ಡಿ.31ರಂದು ತಿರುವನಂತಪುರದ ಪೊಲೀಸ್ ಹೆಡ್‌ಕ್ವಾಟ್ರರ್ಸ್‌ನಿಂದ ಸ್ವೀಕೃತಿ ಪತ್ರವನ್ನು ಮಹಿಳೆಗೆ ಕಳುಹಿಸಿ ಕೊಟ್ಟಿದ್ದಾರೆ. ಅಲ್ಲದೆ ದೂರಿನ ಪ್ರತಿಯನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೂ ಕಳುಹಿಸಿಕೊಡಲಾಗಿದೆ. ಸಿಪಿಎಂ ಮುಖಂಡನ ಲೈಂಗಿಕ ಕಿರುಕುಳದ ಬಗ್ಗೆ ಈ ಹಿಂದೆಯೂ ಕುಂಬಳೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರೂ ಇದನ್ನು ದಾಖಲಿಸಿಕೊಳ್ಳದೆ ಮುಚ್ಚಿಹಾಕಿರುವುದಾಗಿಯೂ ಡಿಜಿಪಿಗೆ ಕಳುಹಿಸಿದ ದೂರಿನಲ್ಲಿ ತಿಳಿಸಲಾಗಿದೆ.