ಮಕ್ಕಳಿಂದ ಧರ್ಮ, ಸಂಸ್ಕೃತಿ ಉಳಿವು : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ

ಬಜಪೆಯಿಂದ ಕಟೀಲುವರೆಗೆ ದೇವರ ಬೆಳ್ಳಿ ಬಂಗಾರದ ಪರಿಕರಗಳ ಮೆರವಣಿಗೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು.
ಬಜಪೆಯಿಂದ ಕಟೀಲುವರೆಗೆ ದೇವರ ಬೆಳ್ಳಿ ಬಂಗಾರದ ಪರಿಕರಗಳ ಮೆರವಣಿಗೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು.
Published on

ಕಿನ್ನಿಗೋಳಿ: ಮಕ್ಕಳಲ್ಲಿ ಭಯ ಭಕ್ತಿಯ ಪರಂಪರೆಯನ್ನು ನಮ್ಮ ತಾಯಂದಿರು ಬೆಳೆಸಿದ್ದಾರೆ, ಇದು ನಮ್ಮ ಧರ್ಮ ಸಂಸ್ಕೃತಿಯ ಉಳಿವಿಗೆ ಕಾರಣವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಆರಂಭೋತ್ಸವ ಮತ್ತು ಏಳನೇ ಮೇಳದ ಪಾದಾರ್ಪಣೆ ಕಾರ್ಯಕ್ರಮ ಅಂಗವಾಗಿ ಬಜಪೆಯಿಂದ ಕಟೀಲುವರೆಗೆ ದೇವರ ಬೆಳ್ಳಿ ಬಂಗಾರದ ಪರಿಕರಗಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಯಕ್ಷಗಾನಕ್ಕೆ 800 ವರ್ಷದ ಇತಿಹಾಸವಿದೆ. ಅನೇಕ ಹಿರಿಯರು ಯಕ್ಷಗಾನಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ, ಸನಾತನ ಸಂಸ್ಕೃತಿ ಬಗ್ಗೆ ತಪ್ಪು ಕಲ್ಪನೆ ಬೇಡ, ಈ ಕಾರಣದಿಂದಲೇ ನಮ್ಮ ಧರ್ಮದ ಮೇಲೆ ದಾಳಿ ನಡೆಯುತ್ತದೆ, ಆದರೆ ಯಾರೂ ದಾಳಿ ಮಾಡಿದರೂ ನಮ್ಮ ಧರ್ಮಕ್ಕೆ ಅಪಾಯವಿಲ್ಲ ಎಂದರು.

ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಸ್ವಾಮೀಜಿ, ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ, ದೇವಳ ಮೊಕ್ತೇಸರ ಮತ್ತು ಆಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಶಾಸಕ ಉಮಾನಾಥ ಕೋಟ್ಯಾನ್, ವಿಧಾನಪರಿಷತ್ ಸದಸ್ಯ ಭೋಜೇಗೌಡ, ಮಾನವ ಹಕ್ಕು ಆಯೋಗ ಅಧ್ಯಕ್ಷ ಶ್ಯಾಮ್ ಭಟ್, ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಯುವ ನಾಯಕ ಮಿಥುನ್ ರೈ, ಯಕ್ಷಧರ್ಮಭೋದಿನಿ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ರಾಘವೇಂದ್ರ ಆಚಾರ್, ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ್ ಆಸ್ರಣ್ಣ, ಮಾಜಿ ಸಂಸದ ಉಪಸ್ಥಿತರಿದ್ದರು.

ಕಟೀಲು ದೇವಳ ಪ್ರಧಾನ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿ, ನಿತೇಶ್ ಎಕ್ಕಾರು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net