ತಾಲೂಕು ಕಚೇರಿಗಳಲ್ಲಿ ಜಾತಿ, ಆದಾಯ, ವಾಸ್ತವ್ಯ ಮೊದಲಾದ ಪ್ರಮಾಣ ಪತ್ರ ಮಾಡಿಸಲು ಸರ್ವರ್ ಸಮಸ್ಯೆಯಿಂದ ಅರ್ಜಿ ಸ್ವೀಕೃತಿ ವಿಳಂಬವಾಗುತ್ತಿದೆ. ಅರ್ಜಿ ಸ್ವೀಕಾರ ಸಂದರ್ಭ ಒಟಿಪಿ ದಾಖಲು ಮಾಡಲು ಇರುವುದರಿಂದ ಗಂಟೆಗಟ್ಟಲೆ ಸಾಲಿನಲ್ಲಿ ನಿಂತುಕೊಳ್ಳುವ ಸಂದರ್ಭ ಎದುರಾಗುತ್ತಿದೆ. ಜನನ, ಮರಣ ಪ್ರಮಾಣ ಪತ್ರ ಪಡೆಯುವಲ್ಲಿಯೂ ಇದೇ ಸಮಸ್ಯೆ ಇದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ದಿನಂಪ್ರತಿ ಸರತಿ ಸಾಲು ಸಾಮಾನ್ಯವಾಗಿದೆ.