ಅಮನ್ ಕುಮಾರ್ ಶರ್ಮ ಎಂಬಾತ ಕರೆ ಮಾಡಿ ತಾನು ಡಾಟಾ ಪ್ರೊಟೆಕ್ಷನ್ ಬೋರ್ಡ್ ಆ್ ಇಂಡಿಯಾದ ಅಧಿಕಾರಿಯಾಗಿದ್ದು, ಯಾರೋ ನಿಮ್ಮ ಗುರುತಿನ ಕಾರ್ಡ್ ಉಪಯೋಗಿಸಿಕೊಂಡು ತನ್ನ ಹೆಸರಿನಲ್ಲಿ ಸಿಮ್ ನಂಬ್ರ ಪಡೆದುಕೊಂಡು ಅವ್ಯವಹಾರ ನಡೆಸಿರುತ್ತಾರೆ. ಆ ಸಿಮ್‌ನ್ನು ರದ್ದು ಮಾಡಲು ಮುಂಬಯಿಯ ಕೊಲಬಾ ಪೊಲೀಸ್ ಠಾಣೆಗೆ ಮಾತನಾಡಿ ಎಂದು ಹೇಳಿ ಕೊಲಬಾ ಪೊಲೀಸ್ ಠಾಣೆಗೆ ೆನ್ ಸಂಪರ್ಕ ನೀಡಿದ್ದ. ನಂತರ ದೂರುದಾರರ ಗುರುತಿನ ಕಾರ್ಡ್ ನಂಬರ್ ಕೇಳಿದ್ದು, ತನ್ನ ಗುರುತಿನ ಕಾರ್ಡ್ ನಂಬ್ರ ನೀಡಿರುತ್ತಾರೆ. ಆಗ ಅವರು ಗುರುತಿನ ಕಾರ್ಡ್ ಉಪಯೋಗಿಸಿಕೊಂಡು ತನ್ನ ಹೆಸರಿನಲ್ಲಿ ಒ.ಎಂ ಅಬ್ದುಲ್ ಸಲಾಮ್ ಎಂಬವರು ಕೆನರಾ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದಿರುತ್ತಾರೆ. ಆ ಖಾತೆಗೆ ಸುಮಾರು 2ಕೋಟಿ ಹಣ ವರ್ಗಾವಣೆಯಾಗಿದ್ದು, ಆ ಹಣದಲ್ಲಿ 20 ಲಕ್ಷ ರೂ. ನಿಮಗೆ ಕಮೀಷನ್ ಆಗಿ ಬಂದಿರುತ್ತದೆ. ಈ ಹಣದ ವರ್ಗಾವಣೆಯ ಮೇಲೆ ನಿಮ್ಮ ವಿರುದ್ದ ಕೇಸ್ ಆಗಿರುತ್ತದೆ. ನಿಮ್ಮ ಮೇಲೆ ಸುಪ್ರೀಂ ಕೋರ್ಟಿನಿಂದ ಅರೆಸ್ಟ್ ವಾರಂಟ್ ಆಗಿರುತ್ತದೆ, ನಿಮ್ಮನ್ನು ಅರೆಸ್ಟ್ ಮಾಡಬೇಕಾಗುತ್ತದೆ ಎಂದು ಹೆದರಿಸಿದ್ದಾರೆ.