ಸಂಶೋಧನಾ ಆಸಕ್ತಿ ಹೆಚ್ಚಿಸಲು ವೇದಿಕೆ : ಕುಲ್ಯಾಡಿ ನರಸಿಂಹ ಪೈ ಪ್ರತಿಪಾದನೆ

ಮೂಲ್ಕಿ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯಲ್ಲಿ ಅಂತರ್ ಶಾಲಾ ವಿಜ್ಞಾನ ಪ್ರದರ್ಶನ ಕುಲ್ಯಾಡಿ ನರಸಿಂಹ ಪೈ ಉದ್ಘಾಟಿಸಿದರು.
ಮೂಲ್ಕಿ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯಲ್ಲಿ ಅಂತರ್ ಶಾಲಾ ವಿಜ್ಞಾನ ಪ್ರದರ್ಶನ ಕುಲ್ಯಾಡಿ ನರಸಿಂಹ ಪೈ ಉದ್ಘಾಟಿಸಿದರು.
Published on

ಮೂಲ್ಕಿ: ವಿದ್ಯಾರ್ಥಿಗಳಲ್ಲಿ ಪ್ರಾಪಂಚಿಕ ಜ್ಞಾನ ಮತ್ತು ಸಂಶೋಧನಾ ಆಸಕ್ತಿ ಹೆಚ್ಚಿಸಲು ವಿಜ್ಞಾನ ಪ್ರದರ್ಶನವು ಉತ್ತಮ ಭೂಮಿಕೆಯಾಗಿದೆ ಎಂದು ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠದ ಅಧ್ಯಕ್ಷ ಕುಲ್ಯಾಡಿ ನರಸಿಂಹ ಪೈ ಹೇಳಿದರು.

ಮೂಲ್ಕಿ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯಲ್ಲಿ, ಮೂಲ್ಕಿ ಲಯನ್ಸ್ ಮತ್ತು ಲಿಯೋ ಕ್ಲಬ್ ಸಂಯೋಜನೆಯಲ್ಲಿ ಅಂತರ್ ಶಾಲಾ ವಿಜ್ಞಾನ ಪ್ರದರ್ಶನ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೂಲ್ಕಿ ಲಯನ್ಸ್ ಅಧ್ಯಕ್ಷ ಐ.ಟಿ.ಹರ್ಷರಾಜ ಶೆಟ್ಟಿ ಜಿ.ಎಂ. ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ವಿಜ್ಞಾನ ಮಾದರಿ ಸ್ಪರ್ಧೆ ಸಹಕಾರಿ ಎಂದರು.

ಶಾಲಾ ಸಂಚಾಲಕ ಪಾಂಡುರಂಗ ಭಟ್, ಲಯನ್ಸ್ ರೀಜನಲ್ ಚೇರ‌್ಮನ್ ಮಾಧವ ಎಸ್.ಶೆಟ್ಟಿ, ವಲಯಾಧ್ಯಕ್ಷ ಪೌಲ್ ರೋಲ್ಫಿ ಡಿಕೋಸ್ಟಾ, ಬ್ಯಾಂಕ್ ಆಫ್ ಬರೋಡ ಮೂಲ್ಕಿ ಸೀನಿಯರ್ ಬ್ರಾೃಂಚ್ ಮ್ಯಾನೇಜರ್ ಸಚಿನ್ ಹೆಗ್ಡೆ, ನಿವೃತ್ತ ಮುಖ್ಯಶಿಕ್ಷಕ ಸ್ಟಾೃನ್ಲಿ ದಿನಮಣಿ, ಮೂಲ್ಕಿ ಲಯನ್ಸ್ ಕೋಶಾಧಿಕಾರಿ ಸುಶೀಲ್ ಬಂಗೇರ ಶುಭ ಹಾರೈಸಿದರು. ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯ ಪ್ರಾಂಶುಪಾಲೆ ಕಾಮಾಕ್ಷಿ ಆರ್. ನಾಯಕ್ ಸ್ವಾಗತಿಸಿದರು. ಲಯನ್ಸ್ ಕಾರ್ಯದರ್ಶಿ ಶೀತಲ್ ಸುಶೀಲ್ ವಂದಿಸಿದರು. ಸಹಶಿಕ್ಷಕರಾದ ಶ್ರೀಲಕ್ಷ್ಮೀ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net