

ಪ್ರಮುಖ ಮುಖ್ಯಾಂಶಗಳು
ಸ್ಯಾಂಡ್ ಬಜಾರ್ ಆಪ್ ಮೂಲಕ ಮರಳು ಬುಕ್ ಮಾಡಿದರೂ ತ್ವರಿತವಾಗಿ ಮರಳಿನ ಲಭ್ಯತೆಯಿಲ್ಲದಾಗಿದೆ. ಈ ಮೂಲಕ ಬರುವ ಮರಳು ಗುಣಮಟ್ಟದಿಂದ ಕೂಡಿರದೆ, ಮಣ್ಣು ಮಿಶ್ರಿತವಾಗಿರುತ್ತದೆ. ಸಾರಣೆ ಕಾಮಗಾರಿಗಳಿಗೆ ಇಂತಹ ಮರಳು ಬಳಸಲಾಗುವುದಲ್ಲಿ. ಸರ್ಕಾರ ಸಮಸ್ಯೆಯನ್ನು ತ್ವರಿತವಾಗಿ ಸರಿಪಡಿಸಿ ತ್ವರಿತವಾಗಿ ಕಡಿಮೆ ದರದಲ್ಲಿ ಮರಳು ಲಭಿಸುವಂತಾಗಬೇಕು.
ಹಿಂದಿನ ಮರಳು ತೆಗೆಯುತ್ತಿರುವ ಗುತ್ತಿಗೆದಾರರಾಗಬೇಕು, ಮರಳು ತೆಗೆಯಲು ೧೦ ವರ್ಷದ ಅನುಭವ ಬೇಕೆಂಬ ನಿಯಮಗಳನ್ನು ಮಾಡಲಾಗಿದೆ. ಇದರಿಂದ ಹೊಸ ಗುತ್ತಿಗೆದಾರಿಗೆ ಅವಕಾಶವಿಲ್ಲದಂತಾಗಿದೆ. ಹಳೆಯದಾಗಿ ೮ ನಿವೇಶನ, ಹೊಸತಾಗಿ ೧೬ ನಿವೇಶನಗಳನ್ನು ಗುರುತಿಸಲಾಗಿದೆ. ಆದರೆ ಇದರ ಗುತ್ತಿಗೆ ಇದುವರೆಗೆ ಆಗಿಲ್ಲ. ಸದ್ಯ ಕೇವಲ ಬೆರಳೆಣಿಕೆ ಸ್ಥಳದಲ್ಲಿ ಮಾತ್ರ ಮರಳುಗಾರಿಕೆ ಆಗುತ್ತಿರುವ ಕಾರಣ ದರ ಹೆಚ್ಚಳವಾಗಿದೆ. ಮರಳಿಗೆ ಬೇಡಿಕೆ ಹೆಚ್ಚಿರುವ ಕಾರಣ ನಿವೇಶನದಲ್ಲೇ ದರ ಹೆಚ್ಚಳ ಮಾಡಲಾಗಿದೆ. ಗುತ್ತಿಗೆದಾರರಿಗೆ ದಾಖಲೆ ಸರಿಯಿಲ್ಲ ಎಂಬ ಹಿಂಬರಹ ಇಲಾಖೆಯಿಂದ ನೀಡಲಾಗುತ್ತಿದೆ. ಮರಳು ಮಾರುಕಟ್ಟೆಗೆ ಬರಬಾರದೆಂಬ ನಿಟ್ಟಿನಲ್ಲಿ ಎಂ ಸ್ಯಾಂಡ್ ತಯಾರಿಕರಿಂದ ಒತ್ತಡವಿದೆ.