ಬಾಲಕನಿಗೆ ಸಲಿಂಗ ಕಿರುಕುಳ, ಐವರ ವಿರುದ್ಧ ಪೋಕ್ಸೋ ಕೇಸ್

ಕಾಸರಗೋಡು ನಗರ ಪೊಲೀಸ್ ಠಾಣೆ ವ್ಯಾಪ್ತಿ
Crime
Crime
Published on: 

ಕಾಸರಗೋಡು: ಹದಿನಾಲ್ಕರ ಹರೆಯದ ಬಾಲಕನಿಗೆ ಸಲಿಂಗ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮೊಗ್ರಾಲ್ ಪುತ್ತೂರು ಕುನ್ನಿಲ್ ಮತ್ತು ಪರಿಸರ ನಿವಾಸಿಗಳಾದ ಮೊಹಮ್ಮದ್ ರಿಯಾಸ್ (38), ಅಬ್ದುಲ್ಲ (55), ಬಶೀರ್ (47), ಸುಲೈಮಾನ್ (40) ಮತ್ತು ಸಲಾವುದ್ದೀನ್ (50) ಎಂಬುವರನ್ನು ಕಾಸರಗೋಡು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ನಗರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ 9ನೇ ತರಗತಿ ವಿದ್ಯಾರ್ಥಿಯನ್ನು ಆರೋಪಿಗಳು ಕಳೆದ ಒಂದು ತಿಂಗಳಲ್ಲಿ ವಿವಿಧ ದಿನಗಳಲ್ಲಿ ಲೈಂಗಿಕ ಕಿರುಕುಳ ನೀಡಿರುವ ದೂರಿನ ಮೇರೆಗೆ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ನೇಣುಬಿಗಿದು ಗೃಹಿಣಿ ಆತ್ಮಹತ್ಯೆ

ಕಾಸರಗೋಡು: ಮಂಜೇಶ್ವರ ಪೊಸೋಟ್ ನಿವಾಸಿ ಅಬ್ದುಲ್ ರಜಾಕ್ ಎಂಬುವರ ಪತ್ನಿ ಆಸ್ಯಾ (48) ಅವರ ಮೃತದೇಹ ಮನೆಯ ಸ್ನಾನಗೃಹದೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಾಪತ್ತೆಯಾಗಿದ್ದ ಅವರನ್ನು ಹುಡುಕಾಡುತ್ತಿದ್ದಾಗ ಸ್ನಾನದ ಮನೆಯಲ್ಲಿ ನೇಣುಬಿಗಿದುಕೊಂಡಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗು ಬಳಸಿ ಭಿಕ್ಷಾಟನೆ ಮಾಡುತ್ತಿದ್ದಾಕೆ ಬಂಧನ

ಕಾಸರಗೋಡು: ಮಕ್ಕಳ ದಿನದಂದು ಎರಡು ವರ್ಷದ ಮಗುವನ್ನು ಬಳಸಿ ಭಿಕ್ಷಾಟನೆ ವಾಡುತ್ತಿದ್ದ ಮಹಿಳೆಯನ್ನು ‘ಚೈಲ್ಡ್ ಪ್ರೊಟೆಕ್ಟ್ ಟೀಮ್ ಇಂಟರ್‌ನ್ಯಾಷನಲ್’ ತಂಡ ಪತ್ತೆಹಚ್ಚಿ ಪೊಲೀಸರ ವಶಕ್ಕೊಪ್ಪಿಸಿದೆ. ಕಾಞಂಗಾಡು ಹಳೇ ಬಸ್ ನಿಲ್ದಾಣದ ಸಮೀಪ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ತಮಿಳುನಾಡು ಮೂಲದ ಮಹಿಳೆ ಕಾಞಂಗಾಡಿನ ಮಣಿಕೊತ್, ಕಟ್ಟಾಡಿ ಪ್ರದೇಶದಲ್ಲಿ ವಾಸಿಸುತ್ತಿದ್ದು, ತನ್ನ ಮೊಮ್ಮಗಳನ್ನು ಹಲವು ಸಮಯದಿಂದ ಭಿಕ್ಷಾಟನೆಗೆ ಬಳಸಿಕೊಳ್ಳುತ್ತಿದ್ದಳು ಎನ್ನಲಾಗಿದೆ. ಮಗು ಸದಾ ನಿದ್ದೆಯಲ್ಲಿರುವುದನ್ನು ಗಮನಿಸಿದ ಹೋಮ್ ಗಾರ್ಡ್ ಪಿ.ಕೆ.ಜಯನ್ ಅಧಿಕಾರಿಗಳಿಗೆ ವಾಹಿತಿ ನೀಡಿದ್ದರು. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವಕೀಲ ಎಂ.ಬಿ.ಮೋಹನನ್ ಕುವಾರ್, ತಂಡದ ಅಧ್ಯಕ್ಷ ಸಿ.ಕೆ.ನಾಸರ್, ಹೋಮ್ ಗಾರ್ಡ್ ಪಿ.ಕೆ.ಜಯನ್ ಹಾಗೂ ಜಿಲ್ಲಾ ಸಂಯೋಜಕ ಶಬೀರ್ ಹಸನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.