

ಸುಬ್ರಹ್ಮಣ್ಯ: ರಬ್ಬರ್ ಬೆಳೆಗಾರರು ಬೆಲೆ ಕುಸಿತದಿಂದ ತೀವ್ರ ತೊಂದರೆಗೊಳಗಾಗಿದ್ದು, ಈ ಬಗ್ಗೆ ಕೃಷಿ ಉತ್ಪನ್ನ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ವರ್ಮುಡಿ ಅವರು ಸಿದ್ಧಪಡಿಸಿದ ರಬ್ಬರ್ ಕೃಷಿಯ ಉತ್ಪಾದನಾ ವೆಚ್ಚ ಮತ್ತು ಸಮಸ್ಯೆಗಳು ಹಾಗೂ ಪರಿಹಾರೋಪಾಯಗಳನ್ನು ಸೂಚಿಸಿದ ಸಮಗ್ರ ಅಧ್ಯಯನ ವರದಿಯನ್ನು ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ ಅವರಿಗೆ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆಯಿಂದ ಗುರುವಾರ ಸಲ್ಲಿಸಲಾಯಿತು.
ರಬ್ಬರ್ ಕೃಷಿಯನ್ನು ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆ ಅಧೀನದಲ್ಲಿ ಸೇರ್ಪಡೆಗೊಳಿಸುವ ಮೂಲಕ ಹವಾಮಾನ ಆಧಾರಿತ ಬೆಳೆ ವಿಮೆ ಮತ್ತು ಕನಿಷ್ಠ ಬೆಂಬಲ ಬೆಲೆ ದೊರಕಿಸಿಕೊಡಬೇಕು ಎಂಬ ಮನವಿಯನ್ನು ಶಾಸಕರಿಗೆ ನೀಡಲಾಯಿತು.
ಕೇಂದ್ರ ರಬ್ಬರ್ ಮಂಡಳಿ ನಿರ್ದೇಶಕ ಮುಳಿಯ ಕೇಶವ ಭಟ್, ಪ್ರಮುಖರಾದ ಸಂತೋಷ್ ಕುತ್ತಮೊಟ್ಟೆ, ವೆಂಕಟ್ ದಂಬೆಕೋಡಿ, ವಿಜಯಕೃಷ್ಣ ಪೆರಾಜೆ, ವಿನಯ ಕುಮಾರ್ ಕಂದಡ್ಕ, ಪ್ರದೀಪ್ ರೈ, ಶಶಿಕಲಾ ಎನ್.ಸುಭಾಶ್ವಂದ್ರ ಬಂಗಾರಕೋಡಿ, ರಾಕೇಶ್ ಮೆಟ್ಟಿನಡ್ಕ ಮತ್ತಿತರರು ಉಪಸ್ಥಿತರಿದ್ದರು.