

ಬೆಳ್ತಂಗಡಿ: ಉಜಿರೆಯಲ್ಲಿ ನಡೆದ ರಾಜ್ಯಮಟ್ಟದ ಸಮ್ಮೇಳನದಲ್ಲಿ ಪ್ರಮುಖ ನಿರ್ಣಯಗಳನ್ನು ಮಂಡಿಸಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಕೈಗೊಂಡ ನಿರ್ಣಯಗಳ ಪೈಕಿ ರಬ್ಬರನ್ನು ಒಂದು ಕೃಷಿ ಉತ್ಪನ್ನವೆಂದು ಮಾನ್ಯತೆ ಮಾಡಬೇಕು. ಪ್ರಸ್ತುತ ರಬ್ಬರ್ ವಾಣಿಜ್ಯ ಇಲಾಖೆ ವ್ಯಾಪ್ತಿಯಲ್ಲಿದ್ದು ಇನ್ನು ಮುಂದೆ ಇದನ್ನು ಕೃಷಿ, ತೋಟಗಾರಿಕಾ ಇಲಾಖೆ ಸುಪರ್ದಿಗೆ ಸೇರಿಸಬೇಕು. ಶೀಟ್ ರಬ್ಬರ್‌ಗೆ ಕಿಲೋ ಒಂದರ 258 ರೂ. ಕನಿಷ್ಠ ದರವೆಂದು ನಿಗದಿಪಡಿಸಬೇಕು. ಕಾಂಪೌಂಡೆಡ್ ಅಥವಾ ಸಂಯುಕ್ತ ರಬ್ಬರಿನ ಆಮದಿನ ಸುಂಕವನ್ನು ಈಗಿರುವ ಶೇ.0ಯಿಂದ ಶೇ.5 ಇರುವುದನ್ನು ಗರಿಷ್ಠ ಪ್ರಮಾಣಕ್ಕೆ ಏರಿಸಿ ಆಮದು ಬೆಲೆ ನಿರ್ಧರಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗಿದೆ.
ರಬ್ಬರ್ ಕೃಷಿಯನ್ನು ತೋಟಗಾರಿಕಾ ಬೆಳೆಯೆಂದು ಪರಿಗಣಿಸಿ ಅದನ್ನು ಆ ಇಲಾಖೆಯ ಸುಪರ್ದಿಗೆ ಸೇರಿಸಬೇಕು. ರಬ್ಬರಿಗೆ ಕನಿಷ್ಠ ಕಿಲೋ ಒಂದಕ್ಕೆ 258 ರೂ. ಬೆಂಬಲ ಬೆಲೆ ನಿಗದಿ ಮಾಡಿ ಬೆಳೆಗಾರರಿಗೆ ದೊರಕುವಂತೆ ಕ್ರಮ ಕೈಗೊಳ್ಳಬೇಕು. ರಬ್ಬರ್ ಕೃಷಿಗೂ ಹಮಾಮಾನ ಆದರಿತ ವಿಮೆ ಸೌಲಭ್ಯ ಒದಗಿಸಿಕೊಡಬೇಕು. ರಾಜ್ಯದಲ್ಲಿ ರಬ್ಬರು ಬೆಲೆ ಸ್ಥಿರೀಕರಣ ನಿಧಿ ಸ್ಥಾಪನೆ ಆಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಗಿದೆ.