_1762863193899.webp?w=480&auto=format%2Ccompress&fit=max)
_1762863193899.webp?w=480&auto=format%2Ccompress&fit=max)
ಬೆಳ್ತಂಗಡಿ: ಹೊಸದಾಗಿ ಆರಂಭವಾಗಿರುವ ಬೆಳ್ತಂಗಡಿ ಉಪವಿಭಾಗಕ್ಕೆ ಡಿವೈಎಸ್ಪಿಯಾಗಿ ಬೆಂಗಳೂರು ವೈಟ್‌ಫೀಲ್ಡ್ ಸೆನ್ ಡಿವೈಎಸ್ಪಿಯಾಗಿದ್ದ ರೋಹಿನಿ ಸಿ.ಕೆ. ಅವರನ್ನು ಸರ್ಕಾರ ನೇಮಕ ಮಾಡಿ ನ.4ರಂದು ಸರ್ಕಾರ ಆದೇಶ ಹೊರಡಿಸಿದ್ದು, ಬೆಳ್ತಂಗಡಿ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಡಿವೈಎಸ್ಪಿ ರೋಹಿನಿ ಸಿ.ಕೆ. 2022ರ ಬ್ಯಾಚ್‌ನಲ್ಲಿ ನೇರನೇಮಕವಾದ ಡಿವೈಎಸ್ಪಿ. ಅವರು ಮೂಲತಃ ಬೆಂಗಳೂರಿನ ಮಲ್ಲೇಶ್ವರಂನವರು. ಜಿಲ್ಲೆಯ ಅತ್ಯಂತ ದೊಡ್ಡ ತಾಲೂಕಾಗಿರುವ ಬೆಳ್ತಂಗಡಿಗೆ ಮೊದಲ ಬಾರಿಗೆ ಉಪವಿಭಾಗ ತೆರೆಯಲಾಗಿದ್ದು, ಮೊದಲ ಡಿವೈಎಸ್ಪಿಯಾಗಿ ನೇಮಕಗೊಂಡಿದ್ದಾರೆ.
ಬೆಳ್ತಂಗಡಿ ವೃತ್ತನಿರೀಕ್ಷಕ ಸುಬ್ಬಾಪುರ ಮಠ್, ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಬೆಳ್ತಂಗಡಿ, ಧರ್ಮಸ್ಥಳ, ವೇಣೂರು, ಪುಂಜಾಲಕಟ್ಟೆ, ಕಡಬ, ಉಪ್ಪಿನಂಗಡಿ ಪೊಲೀಸ್ ಠಾಣಾ ಸಬ್ ಇನ್‌ಸ್ಪೆಕ್ಟರ್‌ಗಳು ಡಿವೈಎಸ್ಪಿ ಸಿ.ಕೆ.ರೋಹಿನಿ ಅವರನ್ನು ಸ್ವಾಗತಿಸಿದರು.