ರಸ್ತೆಗಾಗಿ ಭವತಿ ಭಿಕ್ಷಾಂ ದೇಹಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟರ್.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪೋಸ್ಟರ್.
Published on

ಪ್ರಮುಖ ಮುಖ್ಯಾಂಶಗಳು

  • ಮಾರ್ಗ ದುರಸ್ತಿಗಾಗಿ ಭಿಕ್ಷಾಟನೆ ಅಭಿಯಾನ
  • ಮಡ್ಯಡ್ಕ-ಚಾಕೋಟೆ ಸಂಚಾರ ದುಸ್ತರ
  • ಅಧಿಕಾರಿಗಳಿಂದ ಹುಸಿ ಭರವಸೆ
‘ನಮ್ಮ ಹಳ್ಳಿಯ ಅಭಿವೃದ್ಧಿಗಾಗಿ ನಾವೇ ಕೈಜೋಡಿಸೋಣ. ಸರ್ಕಾರ ಬಾರದಿದ್ದರೇನಂತೆ, ನಮ್ಮ ಊರನ್ನು ನಾವೇ ಉಳಿಸಿಕೊಳ್ಳೋಣ’ ಇದು ವ್ಯವಸ್ಥೆಯ ವಿರುದ್ಧ ಬೇಸತ್ತ ಕಡಬ ತಾಲೂಕು ಕೋಡಿಂಬಾಳ ಗ್ರಾಮದ ಮಡ್ಯಡ್ಕ - ಬೊಳ್ಳೆಕುಕ್ಕು - ಚಾಕೋಟೆ ಭಾಗದ ಗ್ರಾಮಸ್ಥರ ಒಕ್ಕೊರಲ ದನಿಯಾಗಿದೆ. ದಶಕಗಳಿಂದ ರಸ್ತೆ ದುರಸ್ತಿ ಕಾಣದ ಈ ಭಾಗದ ಜನರು ಈಗ ಅಧಿಕಾರಿಗಳ ಕಣ್ಣು ತೆರೆಸಲು ‘ಭಿಕ್ಷಾಟನಾ ಅಭಿಯಾನ’ ಎಂಬ ವಿಭಿನ್ನ ಹಾದಿ ಹಿಡಿದಿದ್ದಾರೆ.

ಪಂಚಾಯಿತಿ ವಿರುದ್ಧ ವಿಭಿನ್ನ ಅಸ್ತ್ರ

ಮಹಿಳಾ ಸಂಘದ ಬೆಂಬಲ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಈ ‘ಭಿಕ್ಷಾಟನಾ ಅಭಿಯಾನ’ದ ಪೋಸ್ಟರ್‌ಗಳು ಭಾರಿ ವೈರಲ್ ಆಗುತ್ತಿದ್ದು, ಜನರ ಆಕ್ರೋಶಕ್ಕೆ ಮಣಿದು ಅಧಿಕಾರಿಗಳು ಯಾವಾಗ ರಸ್ತೆ ಸರಿಪಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಮಡ್ಯಡ್ಕ- ಬೊಳ್ಳೆಕುಕ್ಕು- ಚಾಕೋಟೆ ರಸ್ತೆಯು ಅಯೋಮಯವಾಗಿದೆ. ದುರಸ್ತಿ ಆಗ್ರಹಿಸಿ ಈ ಹಿಂದೆ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸುವಂತೆ ನಿರ್ಧರಿಸಲಾಗಿತ್ತು. ಈ ವೇಳೆ ಸ್ಥಳಕ್ಕೆ ಬಂದ ಅಧಿಕಾರಿಗಳು ನಗರೋತ್ಥಾನ ಅನುದಾನದಲ್ಲಿ ದುರಸ್ತಿ ಪಡಿಸುವ ಭರವಸೆ ನೀಡಿದ್ದರು. ಅದರೆ ಈ ವರೆಗೆ ಬೆಳವಣಿಗೆ ಕಂಡಿಲ್ಲ. ಹಾಗಾಗಿ ರಸ್ತೆ ಅಭಿವೃದ್ಧಿಗಾಗಿ ಭಿಕ್ಷಾಟನೆ ಮೂಲಕ ಹಣ ಸಂಗ್ರಹಿಸಿ ಅಭಿವೃದ್ಧಿ ಪಡಿಸುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಪಟ್ಟಣ ಪಂಚಾಯಿತಿಗೆ ಸಂಗ್ರಹಿಸಿದ ಹಣವನ್ನು ನೀಡುವ ನಿರ್ಧಾರಕ್ಕೆ ಬರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net