ಸ್ವರ್ಗದ ಹಾದಿ ನರಕಕ್ಕೆ ದಾರಿ!: ರಸ್ತೆಯ ಎರಡೂ ಬದಿ ಹೊಂಡ ಸೃಷ್ಟಿ : ಅಪಘಾತ ಸಂಖ್ಯೆ ಹೆಚ್ಚಳ

ಪೆರ್ಲ- ಸೂರಂಬೈಲ್ ರಸ್ತೆಯ ಸ್ವರ್ಗದ ಕಿರುಸೇತುವೆ ಶಿಥಿಲಾವಸ್ಥೆಯಲ್ಲಿದ್ದರೂ ಮೇಲ್ಭಾಗಕ್ಕೆ ಮಾತ್ರ ತೇಪೆ ಹಚ್ಚಿರುವುದು
ಪೆರ್ಲ- ಸೂರಂಬೈಲ್ ರಸ್ತೆಯ ಸ್ವರ್ಗದ ಕಿರುಸೇತುವೆ ಶಿಥಿಲಾವಸ್ಥೆಯಲ್ಲಿದ್ದರೂ ಮೇಲ್ಭಾಗಕ್ಕೆ ಮಾತ್ರ ತೇಪೆ ಹಚ್ಚಿರುವುದು
Published on

ಪ್ರಮುಖ ಮುಖ್ಯಾಂಶಗಳು

  • ಶೋಚನೀಯಾವಸ್ಥೆಯಲ್ಲಿ ಸ್ವರ್ಗ- ಸೂರಂಬೈಲ್ ರಸ್ತೆ
  • ನಿತ್ಯ ಪ್ರಯಾಣಿಸುವ ಜನರು ನರಕಯಾತನೆ
  • ರಸ್ತೆ ದುರಸ್ತಿ ಕೈಗೊಳ್ಳುವಲ್ಲಿ ಲೋಕೋಪಯೋಗಿ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ

ಪ್ರಯಾಣಿಕರಿಗೆ ತಪ್ಪದ ಜೀವಭಯ

ಜನರ ಕಣ್ಣಿಗೆ ಮಣ್ಣೆರೆಚುವ ತಂತ್ರ!

ಪೆರ್ಲ- ಸೂರಂಬೈಲ್ ರಸ್ತೆ ಅಭಿವೃದ್ಧಿಗಾಗಿ ಇಲ್ಲಿನ ಜನತೆ ದೀರ್ಕಾಲದಿಂದ ಆಗ್ರಹಿಸುತ್ತಾ ಬಂದಿದ್ದು, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಹಲವಾರು ಜೀವ ಬಲಿತೆಗೆದುಕೊಂಡಿರುವ ಪ್ರಸಕ್ತ ರಸ್ತೆಯ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಹಾಗೂ ತೋಟಗಾರಿಕಾ ನಿಗಮ ಸಂಯೋಜಿತ ರೀತಿಯಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ.

ರಸ್ತೆ ಅಭಿವೃದ್ಧಿ ಬಗ್ಗೆ ಇಲಾಖೆ ಈಗಾಗಲೇ ಸಮಗ್ರ ರೂಪುರೇಷೆ ಸರ್ಕಾರಕ್ಕೆ ಸಲ್ಲಿಸಿದೆ. ರಸ್ತೆ ಹಾದುಹೋಗುವ ಕೆಲವೆಡೆ ತೋಟಗಾರಿಕಾ ನಿಗಮದ ಜಾಗವಿದ್ದು, ಇದು ರಸ್ತೆ ವಿಸ್ತರಿಸುವಲ್ಲಿ ತೊಡಕಾಗುತ್ತಿದೆ. ಈ ಸಮಸ್ಯೆ ನಿವಾರಿಸಿಕೊಂಡು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಬೇಕಾಗುತ್ತದೆ.

ಸ್ವರ್ಗ ಸಂಪರ್ಕ ರಸ್ತೆ ಅಗಲ ಕಿರಿದಾಗಿರುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net