ರೇಶ್ಮಾ ಉಸಿರುಗಟ್ಟಿ ಸಾವು! : ಶವಮಹಜರು ವರದಿ : ಸಮಗ್ರ ತನಿಖೆಗೆ ಆಗ್ರಹ

ರೇಶ್ಮಾ
ರೇಶ್ಮಾ
Published on

ಕಾಸರಗೋಡು: ಸೋಶಿಯಲ್ ಮಿಡಿಯಾ ಇನ್‌ಫ್ಲುೃವೆಂಜರ್, ಚಿನ್ನು ಪಾಪು ಎಂದೇ ಪರಿಚಿತರಾಗಿರುವ ರೇಶ್ಮಾ(25) ಅವರ ಸಾವು ಉಸಿರುಗಟ್ಟಿ ಸಂಭಿವಿಸಿರುವುದಾಗಿ ಶವಮಹಜರು ವರದಿಯಲ್ಲಿ ತಿಳಿಸಲಾಗಿದೆ.



ಹೆಚ್ಚಿನ ತಪಾಸಣೆಗಾಗಿ ಅಂಗಾಂಗದ ಮಾದರಿಯನ್ನು ಕೋಯಿಕ್ಕೋಡಿನ ವೈದ್ಯಕೀಯ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ. ರೇಶ್ಮಾ ಸಾವಿನ ಬಗ್ಗೆ ಅವರ ಮನೆಯವರು ಸಂಶಯ ವ್ಯಕ್ತಪಡಿಸಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ರೇಶ್ಮಾ ಮೃತದೇಹ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಉಳಿಯತ್ತಡ್ಕ ಸಮೀಪದ ಬಾಡಿಗೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿತ್ತು. ಕೊಠಡಿಯೊಳಗೆ ನೇಣಿನಲ್ಲಿ ನೇತಾಡುತ್ತಿದ್ದ ರೇಶ್ಮಾ ಅವರನ್ನು ಅವರ ಸ್ನೇಹಿತ ಸಂದೇಶ್ ಎಂಬುವರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಕಳೆದ ಕೆಲವು ದಿನಗಳಿಂದ ರೇಶ್ಮಾ ಒಂಟಿಯಾಗಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಮುಖ್ಯವಾಗಿ ತುಳು, ಕನ್ನಡ, ಮಲಯಾಳ, ಕೊಂಕಣಿ ಸೇರಿದಂತೆ ಕಾಸರಗೋಡಿನ ವಿವಿಧ ಭಾಷೆಗಳಲ್ಲಿ ಅಡುಗೆ, ಪ್ರವಾಸ ವಿಡಿಯೋಗಳೊಂದಿಗೆ ಮಿಂಚುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net