ಧರ್ಮ, ಸತ್ಯ, ಮಾನವೀಯತೆಗೆ ಪೂಜನೀಯ ಸ್ಥಾನ : ಸತ್ಯಜಿತ್ ಸುರತ್ಕಲ್
ಕಟ್ಟೆಮಾರ್ ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯದಲ್ಲಿ ವಾರ್ಷಿಕ ಕೋಲ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮನೆಯ ಕೀಯನ್ನು ಹಸ್ತಾಂತರಿಸಲಾಯಿತು. ಪ್ರಮುಖರಾದ ಆಶ್ರಿತ್ ಕಿಶನ್, ಚಂದ್ರಪ್ರಸಾದ್ ಕೆ.ಆರ್., ರಾಜೇಶ್ ಎಲ್. ಮೊದಲಾದವರಿದ್ದರು.
ಆಶ್ರಿತ್ ಕಿಶನ್, ಬೆಂಗಳೂರಿನ ವಕೀಲ ಚಂದ್ರಪ್ರಸಾದ್ ಕೆ.ಆರ್., ಬಿಜೆಪಿ ರಾಜ್ಯ ಪರಿಷತ್ ಸದಸ್ಯ ರಾಜೇಶ್ ಎಲ್., ಅಭಿಲಾಷ್ ಕಡಬ, ಗೌರೀಶ್ ಬೆಂಗಳೂರು, ಸಾಮಾಜಿಕ ಕಾರ್ಯಕರ್ತ ನವೀನ್ ರೆಡ್ಡಿ ಬೆಂಗಳೂರು, ಉದ್ಯಮಿ ಹರೀಶ್ ಶೆಟ್ಟಿ, ಕಾರ್ತಿಕ್ ರೆಡ್ಡಿ, ಲಾಂಚುಲಾಲ್ ಕೆ.ಎಸ್. ಮೊದಲಾದವರಿದ್ದರು.
ಧಾರ್ಮಿಕ ಸಭಾ ಕಾರ್ಯಕ್ರಮದ ನಂತರ ದೊಂದಿ ಬೆಳಕಿನಲ್ಲಿ ಶ್ರೀ ಮಂತ್ರ ದೇವತೆ ದೈವದ ವೈಭವದ ವಾರ್ಷಿಕ ಕೋಲ ಜರಗಿತು. ಡಾ.ಪ್ರಭಾಕರ್ ಭಟ್ ಕಲ್ಲಡ್ಕ, ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಕ್, ಕಟ್ಟೆಮಾರ್ ಚಲನಚಿತ್ರ ತಂಡ, ಕ್ಷೇತ್ರಕ್ಕೆ ಆಗಮಿಸಿ ದೈವದ ಪ್ರಸಾದ ಸ್ವೀಕರಿಸಿದರು. ಕ್ಷೇತ್ರದ ಧರ್ಮದರ್ಶಿ ಮನೋಜ್ ಕುಮಾರ್ ಕಟ್ಟೆಮಾರ್ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ನಿರೂಪಿಸಿದರು. ಕಿಶೋರ್ ಕಟ್ಟೆಮಾರು ವಂದಿಸಿದರು.