

ಪ್ರಮುಖ ಮುಖ್ಯಾಂಶಗಳು
ಪಂಚಾಯಿತಿಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ನಿರ್ವಹಿಸುವ ಸಂದರ್ಭ ಘಟಕಕ್ಕೆ ಬರುವ ಕಸಗಳ ಪೈಕಿ ಹಳೆಯ ಬಟ್ಟೆಗಳು ಹೆಚ್ಚಾಗಿರುತ್ತಿದ್ದವು. ಇವುಗಳನ್ನು ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆಯಾಗಿತ್ತು. ಈ ನಿಟ್ಟಿನಲ್ಲಿ ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸೂಜಿಮಲ್ಲಿಗೆ ಪರಿಕಲ್ಪನೆ ಮೂಲಕ ಮಹಿಳೆಯರಿಗೆ ತರಬೇತಿ ನೀಡಿ ಹಳೆಯ ಬಟ್ಟೆಗಳಲ್ಲಿ ಮರುಬಳಕೆಯ ವಸ್ತುಗಳನ್ನಾಗಿ ರೂಪಿಸಿ ಅವರಿಗೆ ಆದಾಯ ಗಳಿಸಲು ಅವಕಾಶ ಕಲ್ಪಿಸುವ ಪ್ರಯತ್ನ ಇದಾಗಿದೆ.