ರಾಗತಾಳಗಳಿಂದ ಭಗವಂತನ ಸಾಕ್ಷಾತ್ಕಾರ

 ಸುರಸಾರವ ಸಂಗೀತೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸುದರ್ಶನ್ ಎಂ., ಕೆ.ಶ್ರೀಪತಿ ಭಟ್, ಯಶವಂತ್ ಎಂ.ಜಿ, ಪೂರ್ಣಚಂದ್ರ ಜೈನ್, ಈಶ್ವರ ಪ್ರಸಾದ್, ಸುಶಾಂತ್ ಭಂಡಾರಿ, ಆಲ್ವಿನ್ ಸಾಸ್ತಾನ, ಪೂರ್ಣಿಮಾ ಉಡುಪಿ, ಶಶಿಧರ ಪುರೋಹಿತ್ ಕಟಪಾಡಿ, ಸೀತಾರಾಮ ಆಚಾರ್ಯ, ಯಜ್ಞೇಶ್ವರ ಆಚಾರ್ಯ ಉಪಸ್ಥಿತರಿದ್ದರು.
ಸುರಸಾರವ ಸಂಗೀತೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸುದರ್ಶನ್ ಎಂ., ಕೆ.ಶ್ರೀಪತಿ ಭಟ್, ಯಶವಂತ್ ಎಂ.ಜಿ, ಪೂರ್ಣಚಂದ್ರ ಜೈನ್, ಈಶ್ವರ ಪ್ರಸಾದ್, ಸುಶಾಂತ್ ಭಂಡಾರಿ, ಆಲ್ವಿನ್ ಸಾಸ್ತಾನ, ಪೂರ್ಣಿಮಾ ಉಡುಪಿ, ಶಶಿಧರ ಪುರೋಹಿತ್ ಕಟಪಾಡಿ, ಸೀತಾರಾಮ ಆಚಾರ್ಯ, ಯಜ್ಞೇಶ್ವರ ಆಚಾರ್ಯ ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ರಾಗತಾಳಗಳ ಮೂಲಕ ಭಗವಂತನನ್ನು ಸಾಕ್ಷಾತ್ಕಾರಗೊಳಿಸಬಹುದಾಗಿದೆ. ಸಂಗೀತದ ಮೂಲಕ ದೈವಾನುಭವ ಪಡೆಯಲು ಸಾಧ್ಯ. ಸಂಗೀತ ಮನಸ್ಸು, ದೇಹ ಹಾಗೂ ಪ್ರಕೃತಿಯೊಂದಿಗೆ ಸಂಯೋಜನೆ ಸಾಧಿಸಿ ಬದುಕನ್ನು ಹಸನಾಗಿಸುತ್ತದೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಹೇಳಿದರು.
ಮೂಡುಬಿದಿರೆ ಸಮಾಜ ಮಂದಿರದಲ್ಲಿ ಸುರಸಾರವ ಸಂಸ್ಥೆ ದ್ವಿತೀಯ ವರ್ಷದ ಸಂಗೀತೋತ್ಸವ 2026 ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಕಲಾ ಪೋಷಕ ಕೆ.ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದರು. ಸಂಸ್ಥೆ ಅಧ್ಯಕ್ಷ ಯಶವಂತ್ ಎಂ.ಜಿ ಪ್ರಸ್ತಾವಿಕವಾಗಿ ಮಾತನಾಡಿದರು. ಉದ್ಯಮಿಗಳಾದ ಪೂರ್ಣಚಂದ್ರ ಜೈನ್, ಈಶ್ವರ ಪ್ರಸಾದ್, ಸುಶಾಂತ್ ಭಂಡಾರಿ, ಆಲ್ವಿನ್ ಸಾಸ್ತಾನ, ಪೂರ್ಣಿಮಾ ಉಡುಪಿ, ಶಶಿಧರ ಪುರೋಹಿತ್ ಕಟಪಾಡಿ, ಪ್ರೆಸ್ ಕ್ಲಬ್ ಮೂಡುಬಿದಿರೆ ಅಧ್ಯಕ್ಷ ಸೀತಾರಾಮ ಆಚಾರ್ಯ, ಎಸ್.ಕೆ.ಜಿ. ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಯಜ್ಞೇಶ್ವರ ಆಚಾರ್ಯ, ಮೂಡುಬಿದಿರೆ ಪುರಸಭಾ ಸದಸ್ಯ, ಕಾಂಗ್ರೆಸ್ ಅಧ್ಯಕ್ಷ ಪುರಂದರ ದೇವಾಡಿಗ ಉಪಸ್ಥಿತರಿದ್ದರು.
ವಿನಯ್ ಕುಮಾರ್, ರೇಷ್ಮಾ ಶೆಟ್ಟಿ, ವಿಜಯ ಪದ್ಮ, ಪೂಜಾ ಶೆಟ್ಟಿ, ಶಾಂತಿ ಅನಿತಾ, ಸುಷ್ಮಾ ನವೀನ್ ಕೊಟ್ಯಾನ್, ವನಿತಾ ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕ ನಿತೇಶ್ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರ ಸಂಘದ ಸಂಯೋಜಕಿ ಸೌಮ್ಯ ವಂದಿಸಿದರು.
ಭಾರತೀಯ ಸಂಪ್ರದಾಯದಂತೆ ಶಾರದ ಪೂಜೆ ಮತ್ತು ಗುರುವಂದನಾ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ವಿದ್ಯಾರ್ಥಿಗಳ ಸಂಗೀತ ಕಾರ್ಯಕ್ರಮ ನಡೆಯಿತು.

ಪ್ರಶಸ್ತಿ ಪ್ರದಾನ

ಸಂಸ್ಥೆಯ ಪ್ರತಿಷ್ಠಿತ ಕಲಾ ವಿಪೂಷಣ ಪ್ರಶಸ್ತಿಯನ್ನು ಶ್ರೀಪತಿ ಭಟ್ ಅವರಿಗೆ ಪ್ರದಾನಿಸಲಾಯಿತು. ಕಲಾಭೂಷಣ ಪ್ರಶಸ್ತಿಯನ್ನು ಶಶಿಧರ ಪುರೋಹಿತ್ ಕಟಪಾಡಿ, ಕಲಾವಿದ ಉದ್ಯಮಿ ಆಲ್ವಿನ್ ಸಾಸ್ತಾನ, ಕಲಾಪೋಷಕಿ ಪೂರ್ಣಿಮಾ ಉಡುಪಿ ಹಾಗೂ ಕಲಾಸಂಘಟಕ ಸುಶಾಂತ ಭಂಡಾರಿ ಮಂಗಳೂರು ಅವರಿಗೆ ನೀಡಿ ಗೌರವಿಸಲಾಯಿತು. ಯುವ ವಕೀಲ ಶ್ರೀವತ್ಸ ತಂತ್ರಿ ಅವರಿಗೆ ಯುವ ಸಾಧಕ ಪ್ರಶಸ್ತಿ ಪ್ರದಾನಿಸಲಾಯಿತು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ವಿಜೇತ ಹಾಗೂ ಜಿ ಕನ್ನಡ ಸರಿಗಮಪ ಖ್ಯಾತ ಗಾಯಕ ಯಶವಂತ್ ಜೆ.ಜಿ. ಅವರನ್ನು ಸನ್ಮಾನಿಸಲಾಯಿತು.

ಸಂಗೀತ ಸಾಧನೆಯನ್ನು ವೈಯಕ್ತಿಕ ಮಟ್ಟಕ್ಕೆ ಸೀಮಿತಗೊಳಿಸದೆ ಸಮಾಜದ ಮಕ್ಕಳಿಗೆ ಉಪಯೋಗವಾಗುವ ಉದ್ದೇಶದಿಂದ ಸಂಸ್ಥೆ ಸ್ಥಾಪಿಸಲಾಗಿದೆ. ಪ್ರಾರಂಭದಲ್ಲಿ ಸ್ವಗೃಹದಲ್ಲೇ ಸಂಗೀತ ತರಗತಿ ಆರಂಭಿಸಿದ್ದು, ಇಂದು ಅನೇಕ ವಿದ್ಯಾರ್ಥಿಗಳು ಸಂಗೀತ ಶಿಕ್ಷಣ ಪಡೆಯುತ್ತಿದ್ದಾರೆ. ವಿವಿಧ ಭಾಷೆಗಳ ಸಂಗೀತ ಪ್ರಕಾರಗಳನ್ನು ಉತ್ತೇಜಿಸುವ ಗುರಿಯೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net