ಶ್ರೀ ಸುಬ್ರಾಯ ಕ್ಷೇತ್ರದಲ್ಲಿ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶ

ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಂಡಿರುವ ಮಾಣೂರು ಶ್ರೀ ಸುಬ್ರಾಯ ಕ್ಷೇತ್ರ.
ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಂಡಿರುವ ಮಾಣೂರು ಶ್ರೀ ಸುಬ್ರಾಯ ಕ್ಷೇತ್ರ.
Published on
ನೀರುಮಾರ್ಗದ ಹಚ್ಚಹಸಿರಿನ ಪ್ರಕೃತಿಯ ಮಡಿಲಲ್ಲಿ ಶ್ರೀ ಸುಬ್ರಾಯ ಕ್ಷೇತ್ರ ಕಂಗೊಳಿಸುತ್ತಿದ್ದು, ಅಷ್ಟದಿಕ್ಕುಗಳಿಂದಲೂ ಭಕ್ತರ ಸೆಳೆಯುವ ಪುಣ್ಯಕ್ಷೇತ್ರವಾಗಿ ಮೂಡಿಬಂದಿದೆ. ಸುಮಾರು 5 ತಿಂಗಳ ಹಿಂದೆ ಕ್ಷೇತ್ರದ ಜೀರ್ಣೋದ್ಧಾರ ಕಾಮಗಾರಿ ಆರಂಭಗೊಂಡಿದೆ. 54 ಲಕ್ಷ ರೂ. ವೆಚ್ಚದ ರಾಜಗೋಪುರ, 15 ಲಕ್ಷ ರೂ.ವೆಚ್ಚದ ಧ್ವಜಸ್ತಂಭ, 22 ಲಕ್ಷ ರೂ. ವೆಚ್ಚದ ಸುತ್ತುಪೌಳಿ ಕಲ್ಲುಹಾಸು, 10 ಲಕ್ಷ ರೂ.ವೆಚ್ಚದ ನಾಗಬನ ನಿರ್ಮಾಣ, 25 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆಗಳ ನಿರ್ಮಾಣ, 25 ಲಕ್ಷ ರೂ.ವೆಚ್ಚದಲ್ಲಿ ತಂತ್ರಿ-ಅರ್ಚಕರ ವಾಸಸ್ಥಾನ, 15 ಲಕ್ಷ ರೂ.ವೆಚ್ಚದಲ್ಲಿ ಮೇಲ್ಛಾವಣಿ, 15 ಲಕ್ಷ ರೂ. ವೆಚ್ಚದಲ್ಲಿ ಇಂಟರ್‌ಲಾಕ್ ಅಳವಡಿಕೆ, 5 ಲಕ್ಷ ರೂ.ವೆಚ್ಚದಲ್ಲಿ ಸ್ಕಂದ ಪುಷ್ಕರಿಣಿ ಗೋಮುಖ, 10 ಲಕ್ಷ ರೂ. ವೆಚ್ಚದಲ್ಲಿ ತಾಮ್ರದ ಹೊದಿಕೆ ಕಾರ್ಯಗಳು ನಡೆದಿವೆ.

1ರಂದು ಹಸಿರು ಹೊರೆಕಾಣಿಕೆ

ಫೆ.1ರಿಂದ 12ರವರೆಗೆ ಶ್ರೀ ಸುಬ್ರಾಯ ಕ್ಷೇತ್ರದಲ್ಲಿ ದೇವರ ಪುನರ್‌ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತರ ಅನುಕೂಲಕ್ಕೆ ತಕ್ಕಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲು ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ವಿವಿಧ ಉಪಸಮಿತಿಗಳು ನಿರಂತರ ಕೆಲಸ ಮಾಡುತ್ತಿವೆ.

ನೀರುಮಾರ್ಗ ಮಾಣೂರು ಶ್ರೀ ಸುಬ್ರಾಯ ಕ್ಷೇತ್ರದಲ್ಲಿ 2 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿವೆ. ಫೆ. 1-12ರವರೆಗೆ ವೈಭವದ ಬ್ರಹ್ಮಕಲಶೋತ್ಸವ ನಡೆಯಲಿದೆ. ದೇವಾಲಯದಲ್ಲಿ ಲಕ್ಷಾಂತರ ಮಂದಿ ಸೇರುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net