ಹಿಂದೂ ಧರ್ಮದ ರಕ್ಷಣೆಗೆ ರಾಮನ ಆದರ್ಶಗಳೇ ಮೂಲ

ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀ ರಾಮೋತ್ಸವ ಸಮಿತಿ ಮಂಗಳೂರು ವತಿಯಿಂದ ಕದ್ರಿ ಮೈದಾನದಲ್ಲಿ ನಡೆಯುತ್ತಿರುವ 25ನೇ ವರ್ಷದ ಶ್ರೀರಾಮೋತ್ಸವ ಕಾರ್ಯಕ್ರಮದ ಶುಕ್ರವಾರದ ಧಾರ್ಮಿಕ ಸಭೆಯನ್ನು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಉದ್ಘಾಟಿಸಿದರು.
ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀ ರಾಮೋತ್ಸವ ಸಮಿತಿ ಮಂಗಳೂರು ವತಿಯಿಂದ ಕದ್ರಿ ಮೈದಾನದಲ್ಲಿ ನಡೆಯುತ್ತಿರುವ 25ನೇ ವರ್ಷದ ಶ್ರೀರಾಮೋತ್ಸವ ಕಾರ್ಯಕ್ರಮದ ಶುಕ್ರವಾರದ ಧಾರ್ಮಿಕ ಸಭೆಯನ್ನು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಉದ್ಘಾಟಿಸಿದರು.
Published on
ಮಂಗಳೂರು: ಶ್ರೀರಾಮನು ಭಾರತೀಯ ಸಂಸ್ಕೃತಿಯ ಶ್ರೇಷ್ಠ ಆದರ್ಶಪುರುಷ. ಅವರ ಜೀವನವು ಧರ್ಮ, ಸತ್ಯ ಮತ್ತು ನಿಷ್ಠೆಯ ಸಂಕೇತವಾಗಿದ್ದು, ಹಿಂದೂ ಧರ್ಮದ ರಕ್ಷಣೆಗೆ ರಾಮನ ಆದರ್ಶಗಳೇ ಮೂಲ ಎಂದು ಶ್ರೀ ಕ್ಷೇತ್ರ ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖಾನಂದ ಸ್ವಾಮೀಜಿ ಹೇಳಿದರು.
ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀ ರಾಮೋತ್ಸವ ಸಮಿತಿ ಮಂಗಳೂರು ವತಿಯಿಂದ ಕದ್ರಿ ಮೈದಾನದಲ್ಲಿ ನಡೆಯುತ್ತಿರುವ 25ನೇ ವರ್ಷದ ಶ್ರೀರಾಮೋತ್ಸವ ಕಾರ್ಯಕ್ರಮದ ಶುಕ್ರವಾರದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ರಾಮನ ಆದರ್ಶಗಳನ್ನು ಪಾಲಿಸುವುದು ಪ್ರತಿಯೊಬ್ಬರ ಜೀವನದಲ್ಲಿ ಶಾಂತಿ ಮತ್ತು ಸದುಪದೇಶವನ್ನು ತರುತ್ತದೆ. ಹಿಂದೂ ಧರ್ಮದ ರಕ್ಷಣೆಗೆ ರಾಮನ ಜೀವನಮೌಲ್ಯಗಳು ಅತ್ಯಂತ ಮುಖ್ಯ. ಸತ್ಯದ ಮಾರ್ಗದಲ್ಲಿ ನಡೆಯುವುದು, ಅನ್ಯಾಯದ ವಿರುದ್ಧ ಹೋರಾಡುವುದು ಮತ್ತು ಸಮಾಜದಲ್ಲಿ ಸೌಹಾರ್ದತೆಯನ್ನು ಬೆಳೆಸುವುದು ರಾಮನಿಂದ ಕಲಿಯಬೇಕಾದ ಪ್ರಮುಖ ಗುಣಗಳು. ರಾಮರಾಜ್ಯವು ನ್ಯಾಯ, ಸಮಾನತೆ ಮತ್ತು ಧರ್ಮಾಧಿಷ್ಠಿತ ಆಡಳಿತದ ಪ್ರತೀಕವಾಗಿದೆ. ಇಂತಹ ಮೌಲ್ಯಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ಮತ್ತು ಸದಾಚಾರ ನೆಲೆಸುತ್ತದೆ ಎಂದರು.
ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಕಾರ್ಯಕ್ರಮ ಉದ್ಘಾಟಿಸಿದರು.
ಶಾರದಾ ವಿದ್ಯಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ರಾಷ್ಟ್ರಯ ಸ್ವಯಂಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್, ಶಾಸಕ ಡಿ.ವೇದವ್ಯಾಸ ಕಾಮತ್, ಪ್ರಮುಖಾದ ಶಿವಪ್ಪ ನಂತೂರು, ಜಗದೀಪ್ ಡಿ.ಸುವರ್ಣ, ದಿಲ್‌ರಾಜ್ ಆಳ್ವಾ, ಡಾ.ಅಪೂರ್ವ ಶ್ರೀ ಜಯದೇವ, ಅಕ್ಷಿತ್ ಸುವರ್ಣ, ದಿವಾಕರ ಪಾಂಡೇಶ್ವರ, ಶ್ರೀಧರ ಶೆಟ್ಟಿ ಪುಳಿಂಚ, ಲೋಕೇಶ್ ಬೋಳಾರ, ಗುರಪ್ರಸಾದ್, ವಿಹಿಂಪ ದ.ಕ. ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ,ರಾಮೋತ್ಸವ ಸಮಿತಿ ಅಧ್ಯಕ್ಷ ಸುನಿಲ್ ಆಚಾರ್, ಕಾರ್ಯಾಧ್ಯಕ್ಷ ಸುದರ್ಶನ ಮೂಡುಬಿದರೆ, ಗೌರವ ಸಲಹೆಗಾರ ಮೋನಪ್ಪ ಭಂಡಾರಿ, ಶುಶಿರಾಜ್ ಕೊಟ್ಟಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
------------------
ಇಂದು ಕಾಲದಲ್ಲಿ ಅಶಾಂತಿ, ಅನ್ಯಾಯ ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಮನ ಆದರ್ಶಗಳು ನಮಗೆ ದಾರಿದೀಪವಾಗಿವೆ. ಕುಟುಂಬದಲ್ಲಿ ಪ್ರೀತಿ, ಸಮಾಜದಲ್ಲಿ ಒಗ್ಗಟ್ಟು ಮತ್ತು ರಾಷ್ಟ್ರದಲ್ಲಿ ಸನ್ಮಾರ್ಗ ಸ್ಥಾಪಿಸಲು ರಾಮನ ಮೌಲ್ಯಗಳನ್ನು ಅನುಸರಿಸುವುದು ಅಗತ್ಯ. ಹೀಗಾಗಿ ಪ್ರತಿಯೊಬ್ಬರೂ ರಾಮನ ಸತ್ಯ, ಧರ್ಮ ಮತ್ತು ಕರ್ತವ್ಯನಿಷ್ಠೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು.
-ಶ್ರೀರಾಜಶೇಖರಾನಂದ ಸ್ವಾಮೀಜಿ,
ಶ್ರೀ ಕ್ಷೇತ್ರ ಗುರುಪುರ ವಜ್ರದೇಹಿ ಮಠ

ಭವ್ಯ ಶೋಭಾಯಾತ್ರೆ

ಮಾ.29ರವರೆಗೆ ಕದ್ರಿ ಮೈದಾನದಲ್ಲಿ 25 ನೇ ವರ್ಷದ ಶ್ರೀ ರಾಮೋತ್ಸವ ಹಿನ್ನೆಲೆಯಲ್ಲಿ ಗುರುವಾರ ಭವ್ಯ ಶೋಭಾಯಾತ್ರೆ ನಡೆಯಿತು. ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಿಂದ ಕದ್ರಿ ಮೈದಾನಕ್ಕೆ ಶ್ರೀರಾಮ, ಸೀತಾ, ಲಕ್ಷ್ಮಣ, ಹನುಮಂತ ದೇವರ ರಜತ ಮೂರ್ತಿಗಳ ಭವ್ಯ ಶೋಭಾಯಾತ್ರೆ ನೆರವೇರಿತು. ಬಳಿಕ ಕದ್ರಿ ಮೈದಾನದ ವೇದಿಕೆಯಲ್ಲಿ ಭಜನೆ ನಡೆಯಿತು. ಮೆರವಣಿಗೆಯಲ್ಲಿ ಕಲಶ ಹೊತ್ತ ಮಹಿಳೆಯರು, ಕುಣಿತ ಭಜನೆ, ಗಾರುಡಿ ಗೊಂಬೆಗಳು, ಚೆಂಡೆವಾದನ ಮೆರುಗು ನೀಡಿದವು. ಕದ್ರಿ ದೇವಸ್ಥಾನದಲ್ಲಿ ಉದ್ಯಮಿ ಪುಷ್ಪರಾಜ ಜೈನ್ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಕದ್ರಿಯ ಆಡಳಿತ ಮೊಕ್ತೇಸರ ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆರ್‌ಎಸ್‌ಎಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮುಖ್ಯ ಅತಿಥಿಗಳಾಗಿದ್ದರು. ದೇರೆಬೈಲ್ ವಿಠಲದಾಸ ತಂತ್ರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net