ರೈಲ್ವೆ ಮೇಲ್ಸೇತುವೆ ತೂಗುಗತ್ತಿ! Railway Bridge

ರೈಲ್ವೆ ಮೇಲ್ಸೇತುವೆಯ ಇನ್ನೊಂದು ಭಾಗದ ಕಾಂಕ್ರೀಟ್ ಜಗ್ಗಿರುವುದು.
ರೈಲ್ವೆ ಮೇಲ್ಸೇತುವೆಯ ಇನ್ನೊಂದು ಭಾಗದ ಕಾಂಕ್ರೀಟ್ ಜಗ್ಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬ್ರಿಡ್ಜ್ ಇಕ್ಕೆಲಗಳಲ್ಲಿ ಹಂಪ್ಸ್ ಪ್ರತ್ಯಕ್ಷ
  • ‘ಅಸಮರ್ಪಕ ಕಾಮಗಾರಿ’ಯಿಂದ ಅಪಾಯ

ಪುತ್ತೂರು:ನೆಹರು ನಗರ- ವಿವೇಕಾನಂದ ಕಾಲೇಜು- ಹಾರಾಡಿ ಸಂಪರ್ಕ ಕಲ್ಪಿಸುವ ರೈಲ್ವೆ ಮೇಲ್ಸೇತುವೆಯನ್ನು .೩೪ ಕೋಟಿರೂ. ವೆಚ್ಚದಲ್ಲಿ ಭಾರತೀಯ ರೈಲ್ವೆ ಇಲಾಖೆ ಹೊಸದಾಗಿ ನಿರ್ಮಾಣ ಮಾಡಿದ್ದು, ಕಾಮಗಾರಿ ಹಸ್ತಾಂತರಗೊಂಡು ವರ್ಷ ಕಳೆಯುವ ಮುನ್ನವೇ ಸಮಸ್ಯೆಗಳು ಕಾಣಲಾರಂಭಿಸಿವೆ. ಬಗ್ಗೆ ಅಗತ್ಯಕ್ರಮಕೈಗೊಳ್ಳಬೇಕಾದ ರೈಲ್ವೆ ಇತ್ತ ಕಡೆ ಸುಳಿಯುತ್ತಿಲ್ಲ.

ಬಂಟ್ವಾಳ-ಕಬಕ ಪುತ್ತೂರು ರೈಲ್ವೆ ನಿಲ್ದಾಣದ ನಡುವಿನಲ್ಲಿ ಬರುವ ಸೇತುವೆ ನಂಬರ್ ೫೨೦ರಲ್ಲಿ ನಿತ್ಯ ೧೦ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ನಿತ್ಯ ಸಾಗುತ್ತಾರೆ. ಪುತ್ತೂರು ಪೇಟೆಗೆ ಹೋಗದೆ ಉಪ್ಪಿನಂಗಡಿ ರಸ್ತೆಯನ್ನು ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆಯಾಗಿರುವುದರಿಂದ ವಾಹನಗಳು ಓಡಾಟವೂ ಹೆಚ್ಚಿದೆ. ರೈಲ್ವೆ ಮೇಲ್ಸೇತುವೆ ಸೇತುವೆ ವಿಸ್ತರಣೆ ಬೇಡಿಕೆ ಪ್ರಕಾರ ೨೦೨೪ರಲ್ಲಿ ಹೊಸ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಿತ್ತು.

ವರ್ಷದಹಿಂದೆ ಸೇತುವೆಯ ಒಂದು ಭಾಗದ ರಸ್ತೆ ಜಗ್ಗಿ ವಾಹನ ಸಂಚಾರಕ್ಕೆ ಸಮಸ್ಯೆ ಮಾಡುತ್ತಿದ್ದರೆ, ಸದ್ಯ ಸೇತುವೆಯ ಇನ್ನೊಂದು ಭಾಗದ ಕಾಂಕ್ರೀಟ್ ರಸ್ತೆಯೂ ಜಗ್ಗಿ ಫುಟ್ಪಾತ್ಹಾಗೂ ರಸ್ತೆ ನಡುವೆ ಇಂಚಿನಿಂದ ಬಿರುಕುಪ್ರತ್ಯಕ್ಷವಾಗಿದೆ. ಮುಂದಿನ ಮಳೆಗಾಲದಲ್ಲಿ ಇದರ ಮೂಲಕ ನೀರು ಹೋಗಲು ಶುರುವಾದರೆ, ಫುಟ್ಪಾಟ್ಹಾಗೂ ರೈಲ್ವೆ ಮೇಲ್ಸೇತುವೆಯ ತಡೆಗೋಡೆಗೆ ಹಾನಿಯಾಗುವ ಸಾಧ್ಯತೆಯಿದೆ.

ನಿತ್ಯಪ್ರಭಾವಿ ವ್ಯಕ್ತಿಗಳು ಸೇತುವೆ ಮೇಲೆಸಂಚಾರ ಮಾಡಿ ಸಮಸ್ಯೆಯನ್ನು ಗಮನಿಸಿದರೂ ಅಗತ್ಯ ಕ್ರಮಕ್ಕೆ ಇಲಾಖೆಗೆ ಪತ್ರ ಬರೆಯುವ ಕಾರ್ಯ ಮಾಡುತ್ತಿಲ್ಲ. ಕಳಪೆ ಕಾಮಗಾರಿ ಮಾಡಿದರೂ ಅದನ್ನು ಪ್ರತಿಭಟಿಸುವ ಕೆಲಸಕ್ಕೆ ಹೋಗುತ್ತಿಲ್ಲ. ಇಂಥ ದುರವಸ್ಥೆಯ ಹಿಂದೆ ಪ್ರಭಾವಿಗಳ ಪಾಲು ಇದೆಯೇ ಎಂಬ ಪ್ರಶ್ನೆ ಸಾರ್ವಜನಿಕರದ್ದು.

ಡಾಂಬರುಎದ್ದು ಕಿರಿಕಿರಿ!

ವರ್ಷದಹಿಂದೆ ಜಗ್ಗಿದ್ದ ರಸ್ತೆಗೆ ಹಾಕಿದ ಡಾಂಬರು ಸಂಚಾರಕ್ಕೆ ಸಮಸ್ಯೆಯಾಗದಂತೆ ಮಾಡಿದ ಕಾಮಗಾರಿ ಎದ್ದು ಹೋಗಲಾರಂಭಿಸಿ ವಾಹನ ಸಂಚಾರಕ್ಕೆ ಕಿರಿಕಿರಿಯುಂಟು ಮಾಡುತ್ತಿದೆ. ಕಾಂಕ್ರೀಟ್ ಕಾಮಗಾರಿ ಜಗ್ಗಿ ಸಮಸ್ಯೆಯಾಗಿರುವುದಕ್ಕೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ರೈಲ್ವೆ ಅಽಕಾರಿಗಳು ಮುಂದಾಗಿಲ್ಲ. ಸಮರ್ಪಕವಾಗಿ ನಿರ್ವಹಣೆ ಮಾಡದೆ, ಓಡಾಡುವ ಮಕ್ಕಳ ಹಾಗೂ ವಾಹನ ಸವಾರ ಜೀವಕ್ಕೆ ತೂಗುಗತ್ತಿಯಂತಾಗಿದೆ.

ಅಂದೇಎಚ್ಚರಿಸಿತ್ತು ವಿಜಯವಾಣಿ

ನೆಹರುನಗರ ರೈಲ್ವೆ ಮೇಲ್ಸೇತುವೆಯ ಫುಟ್ಪಾತ್ಕಾಮಗಾರಿಯನ್ನು ೨೦೨೪ರ ಜುಲೈನಲ್ಲಿ ಮಳೆ ಸಂದರ್ಭ ಛತ್ರಿ ಹಿಡಿದು ಮಾಡಲಾಗಿತ್ತು. ಸಂದರ್ಭವೇ ಕಾಮಗಾರಿಗುಣಮಟ್ಟದ ಬಗ್ಗೆ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಬಗ್ಗೆವಿಜಯವಾಣಿ ಜು.೨ರಂದು ವಿಶೇಷ ವರದಿಯನ್ನು ಪ್ರಕಟಿಸಿ ಎಚ್ಚರಿಸಿತ್ತು.

ಐದುಇಂಚು ಜಗ್ಗಿತ್ತು!

ರೈಲ್ವೆಇಲಾಖೆ ಸ್ಥಳದ ಮಣ್ಣು ಪರೀಕ್ಷೆಯನ್ನು ನಡೆಸಿ ಯೋಜನಾ ವರದಿ ಸಿದ್ಧಪಡಿಸಿ ಕಾಮಗಾರಿ ರಂಭಿಸಿತ್ತು. ಆದರೂ ಕಾಮಗಾರಿ ಪೂರ್ಣಗೊಂಡ ಮೂರು ತಿಂಗಳಲ್ಲೇ ಸೇತುವೆಯ ಒಂದು ಭಾಗದ ರಸ್ತೆಗೆ ಹಾಕಿದ ಕಾಂಕ್ರೀಟ್ ಸುಮಾರು ಇಂಚಿನಷ್ಟು ಜಗ್ಗಿವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು. ಬಗ್ಗೆ ಆಗಸ್ಟ್ನಲ್ಲಿವಿಜಯವಾಣಿವರದಿ ಪ್ರಕಟಿಸಿತ್ತು. ಬಳಿಕ ಇಲಾಖೆತಾತ್ಕಾಲಿಕ ಪರಿಹಾರವಾಗಿ ಡಾಂಬರು ಹಾಕಿ ಸಮತಟ್ಟು ಮಾಡಿ ವಾಹನ ವೇಗ ನಿಯಂತ್ರಕವನ್ನು ರಸ್ತೆಗೆ ಅಳವಡಿಸಿತ್ತು.

"

ರೈಲ್ವೆ ಇಲಾಖೆಯ ಕಾಮಗಾರಿ ಅತ್ಯುತ್ತಮ ಗುಣಮಟ್ಟದ್ದೆಂಬ ಹೆಸರು ಹಿಂದೆ ಇತ್ತು. ಆದರೆ ಈಗಿನ ಕಾಮಗಾರಿಗಳನ್ನು ಗಮನಿಸಿದರೆ, ಹತ್ತು ವರ್ಷ ಪೂರೈಸುವುದು ಅನುಮಾನ ಎಂಬಂತಿದೆ. ಅಧಿಕಾರಿಗಳು ಕಡತದಲ್ಲಿ ಮಾತ್ರ ಕೆಲಸಗಳ ನಿರ್ವಹಣೆಯನ್ನು ಮಾಡುತ್ತಿದ್ದಾರೆಯೇ? ಎಂಬ ಪ್ರಶ್ನೆ ಮೂಡಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net