ಪಿಗ್ಮಿ ಕಲೆಕ್ಟರ್ ಆತ್ಮಹತ್ಯೆ

ಮಲವಂತಿಗೆ ಗ್ರಾಮದ ಬಾಳೆಹಿತ್ತಿಲು ನಿವಾಸಿ
 ಪುನೀತ್ ಯಾನೆ ಪುರುಷೋತ್ತಮ್ ಗೌಡ
ಪುನೀತ್ ಯಾನೆ ಪುರುಷೋತ್ತಮ್ ಗೌಡ
Published on: 

ಬೆಳ್ತಂಗಡಿ: ಸಹಕಾರಿ ಸಂಘವೊಂದರ ಬೆಳ್ತಂಗಡಿ ಶಾಖೆಯಲ್ಲಿ ಪಿಗ್ಮಿ ಕಲೆಕ್ಟರ್ ಕೆಲಸ ಮಾಡುತ್ತಿದ್ದ ಮಲವಂತಿಗೆ ಗ್ರಾಮದ ಬಾಳೆಹಿತ್ತಿಲು ನಿವಾಸಿ ಪುನೀತ್ ಯಾನೆ ಪುರುಷೋತ್ತಮ್ ಗೌಡ(34) ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆಲಸಕ್ಕೆ ರಜೆ ಹಾಕಿದ್ದ ಅವರು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸಂಬಂಧಿಕರು ಹಾಗೂ ಸಹೋದರರೊಂದಿಗೆ ಉತ್ಸಾಹದಿಂದ ಕಾಲ ಕಳೆದಿದ್ದರು. ರಾತ್ರಿ ಸುಮಾರು 9.30ರ ವೇಳೆಗೆ ಮನೆಯ ಸಮೀಪದ ತೋಟದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವಿವಾಹಿತರಾಗಿದ್ದು, ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.