ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ PUTTUR

ಬಕ್ರೀದ್ ಹಿನ್ನೆಲೆಯಲ್ಲಿ ಪುತ್ತೂರು ಸಂಚಾರಿ ಠಾಣೆಯಲ್ಲಿ ನಡೆದ ಪುತ್ತೂರು ಉಪ ವಿಭಾಗಮಟ್ಟದ ಸಭೆಯಲ್ಲಿ ಪೊಲೀಸ್ ಉಪಾಽಕ್ಷಕ ಪ್ರಮೋದ್ ಕುಮಾರ್ ಮಾತನಾಡಿದರು. ಜಾನ್ಸನ್ ಡಿಸೋಜ, ತಿಮ್ಮಪ್ಪ ನಾಯ್ಕ, ಸುನೀಲ್ ಕುಮಾರ್, ದುರ್ಗಾ ಸಿಂಗ್ ಇದ್ದರು.
ಬಕ್ರೀದ್ ಹಿನ್ನೆಲೆಯಲ್ಲಿ ಪುತ್ತೂರು ಸಂಚಾರಿ ಠಾಣೆಯಲ್ಲಿ ನಡೆದ ಪುತ್ತೂರು ಉಪ ವಿಭಾಗಮಟ್ಟದ ಸಭೆಯಲ್ಲಿ ಪೊಲೀಸ್ ಉಪಾಽಕ್ಷಕ ಪ್ರಮೋದ್ ಕುಮಾರ್ ಮಾತನಾಡಿದರು. ಜಾನ್ಸನ್ ಡಿಸೋಜ, ತಿಮ್ಮಪ್ಪ ನಾಯ್ಕ, ಸುನೀಲ್ ಕುಮಾರ್, ದುರ್ಗಾ ಸಿಂಗ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಎಸ್‌ಪಿ ಪ್ರಮೋದ್ ಕುಮಾರ್ ಎಚ್ಚರಿಕೆ
  • ಪುತ್ತೂರು ಉಪ ವಿಭಾಗಮಟ್ಟದ ಸಭೆ
ಪುತ್ತೂರು: ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು ಮತ್ತು ಇದಕ್ಕೆ ಅವಕಾಶವೂ ಇಲ್ಲ. ಏನೇ ಸಮಸ್ಯೆ, ಅಹಿತಕರ ಘಟನೆಗಳು ನಡೆದರೂ ಘಟನಾ ಸ್ಥಳದ ವಿಡಿಯೋ ಮಾಡಿ ೧೧೨ಗೆ ಮಾಹಿತಿ ನೀಡಬಹುದು. ಮಾಹಿತಿದಾರರ ಹೆಸರು ಪತ್ತೆಯಾಗದಂತೆ ದೂರು ನೀಡಲು ಅವಕಾಶಗಳಿದ್ದು, ಕೆಎಸ್‌ಪಿ ಆಪ್ ಬಳಸಬಹುದು. ಹಬ್ಬದ ಹಿನ್ನೆಲೆಯಲ್ಲಿ ಬೀಟ್ ಸಿಬ್ಬಂದಿಯನ್ನು ಸನ್ನದ್ದು ಸ್ಥಿತಿಯಲ್ಲಿ ಇರಿಸಲಾಗಿದೆ ಮತ್ತು ಹೆಚ್ಚುವರಿ ಗಸ್ತು ಸಿಬ್ಬಂದಿ ನೇಮಿಸಲಾಗಿದೆ. ಸುಳ್ಳು ಮಾಹಿತಿಯನ್ನು ನೀಡಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಉಪಾಽಕ್ಷಕ ಪ್ರಮೋದ್ ಕುಮಾರ್ ಹೇಳಿದರು.
ಬಕ್ರೀದ್ ಹಿನ್ನೆಲೆಯಲ್ಲಿ ಪುತ್ತೂರು ಸಂಚಾರಿ ಠಾಣೆಯಲ್ಲಿ ನಡೆದ ಪುತ್ತೂರು ಉಪ ವಿಭಾಗಮಟ್ಟದ ಸಭೆಯಲ್ಲಿ ಮಾತನಾಡಿದರು.
ಕಾನೂನು ಪಾಲನೆ ಮಾಡುವ ಜನರಿಗೆ ತೊಂದರೆ ಆಗಬಾರದು ಹಾಗೂ ಕಾನೂನು ಉಲ್ಲಂಘಿಸುವವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ವ್ಯಾಪಾರ ನಡೆಸುವುದಕ್ಕೆ ಯಾರೂ ತೊಂದರೆ ನೀಡುವುದಿಲ್ಲ. ರಾತ್ರಿ ೧೨ರಿಂದ ಬೆಳಗ್ಗಿನ ಜಾವ ೫ರವರೆಗೆ ಎಲ್ಲೆಂದರಲ್ಲಿ ಸುತ್ತಾಡುವವರನ್ನು ವಿಚಾರಣೆ ನಡೆಸಲಾಗುವುದು ಎಂದರು.
ನಗರ ಠಾಣೆ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ, ಮೂರು ದಿನ ಹಬ್ಬ ಇರುವ ಕಾರಣ ನಗರಸಭೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಹಕಾರ, ತಾಳ್ಮೆ ಇದ್ದಾಗ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ಸರ್ಕಾರಿ ಅಽಕಾರಿಗಳ ಕರ್ತವ್ಯಕ್ಕೆ ತೊಂದರೆ ಮಾಡದೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಸುಳ್ಯ ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಮಹಿಳಾ ಠಾಣೆ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್, ವಿವಿಧ ಠಾಣೆಗಳ ಉಪ ನಿರೀಕ್ಷಕರಾದ ಸುಷ್ಮಾ, ಸುರೇಶ್, ಸೇಸಮ್ಮ, ಈರಯ್ಯ, ಸುಹಾಸ್, ಪ್ರೊಬೆಷನರಿ ಉಪನಿರೀಕ್ಷಕರಾದ ಅರುಣ್ ಮಹಾಂತೇಶ್, ಗಣೇಶ್, ಮೆಸ್ಕಾಂ ಕಿರಿಯ ಇಂಜಿನಿಯರ್‌ಗಳಾದ ದುರ್ಗಾ ಸಿಂಗ್, ಕೀರ್ತನಾ ಪರಮೇಶ್, ನಗರಸಭೆಯ ಜಯಲಕ್ಷ್ಮೀ, ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಉಪಸ್ಥಿತರಿದ್ದರು.

ನಾಗರಿಕರ ಆಗ್ರಹ

ನಗರದಲ್ಲಿರುವ ಸಿಸಿ ಕ್ಯಾಮರಾಗಳು ಯಾವುದೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹಬ್ಬದ ಕೆಲವು ದಿನ ಮೊದಲು ರಾತ್ರಿ ೧೨ರವರೆಗೆ ವ್ಯಾಪಾರ ನಡೆಸಲು ಅವಕಾಶ ನೀಡಬೇಕು. ತಿರುವುಗಳಲ್ಲಿ ವಾಹನ ನಿಲ್ಲಿಸಿ ತಪಾಸಣೆ ಮಾಡುವುದರಿಂದ ಬೇರೆ ವಾಹನಗಳಿಗೆ ತೊಂದರೆಯಾಗುತ್ತದೆ. ಪೋಕ್ಸೋ ಪ್ರಕರಣ, ಅತ್ಯಾಚಾರ ಪ್ರಕರಣದಡಿ ಜೈಲಿಗೆ ಹೋಗಿ ಹೊರಗೆ ಬಂದ ಬಳಿಕ ಎಲ್ಲರ ಜತೆಗೆ ಬೆರೆಯುವುದಕ್ಕೆ ಅವಕಾಶ ನೀಡುವುದರಿಂದ ಮತ್ತೆ ಸಮಸ್ಯೆಗೆ ಕಾರಣವಾಗುತ್ತದೆ. ಪರವಾನಗಿ ಇಲ್ಲದೆ ಮಕ್ಕಳನ್ನು ಉಳಿಸಿಕೊಂಡು ಶಿಕ್ಷಣವನ್ನು ನೀಡುವವರ ವಿರುದ್ಧ ಅಗತ್ಯ ಕ್ರಮವಾಗಬೇಕು. ಹಬ್ಬದ ದಿನ ವಾಹನಗಳಲ್ಲಿ ಹೆಚ್ಚಿನ ಮಂದಿಯನ್ನು ಕೂರಿಸಿಕೊಂಡು ಹೋಗುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ನಾಗರಿಕರು ಆಗ್ರಹಿಸಿದರು.

ವಿಟ್ಲ ಠಾಣೆಯಲ್ಲಿ ಬಕ್ರಿದ್ ಶಾಂತಿಸಭೆ

ವಿಟ್ಲ: ಹಬ್ಬಗಳನ್ನು ಉತ್ತಮ ರೀತಿಯಲ್ಲಿ ಆಚರಿಸಲು ಇಲಾಖೆಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಾರ್ಥನೆ ಮುಗಿದ ನಂತರ ಮನೆ ಭೇಟಿ ವೇಳೆ ಅಪ್ರಾಪ್ತರ ಕೈಗೆ ವಾಹನ ಸಿಗದಂತೆ ಎಚ್ಚರ ವಹಿಸಬೇಕು. ಕೇರಳ ಗಡಿಯಲ್ಲಿ ಅಗತ್ಯ ಮುನ್ನೆಚ್ಚರಿಕೆಯನ್ನು ಇಲಾಖೆ ತೆಗೆದುಕೊಂಡಿದ್ದು, ವಾಹನಗಳ ತಪಾಸಣೆಗೂ ಕ್ರಮ ವಹಿಸಲಾಗಿದೆ ಎಂದು ವಿಟ್ಲ ಪೊಲೀಸ್ ಠಾಣೆ ನಿರೀಕ್ಷಕ ಪಕಾಶ್ ದೇವಾಡಿಗ ಹೇಳಿದರು.

ಪೊಲೀಸ್ ಠಾಣೆ ಸಭಾಂಗಣದಲ್ಲಿ ಬಕ್ರೀದ್ ಹಿನ್ನೆಲೆಯಲ್ಲಿ ವಿಟ್ಲ ವ್ಯಾಪ್ತಿಯ ಪ್ರಮುಖರೊಂದಿಗೆ ಶಾಂತಿಸಭೆ ನಡೆಸಿ ಮಾತನಾಡಿದರು.

ಪ್ರಾರ್ಥನೆ ವೇಳೆ ಹೆಚ್ಚಿನ ಜನಸಂದಣಿಯಿರುವುದರಿಂದ ಸಂಚಾರ ದಟ್ಟಣೆಯಾಗುವ ಸಾಧ್ಯತೆಯಿದೆ. ಇದಕ್ಕೆ ಅಗತ್ಯ ಕ್ರಮದ ಜತೆಗೆ ಪ್ರತಿಯೊಬ್ಬರ ಸಹಕಾರವೂ ಅಗತ್ಯವಿದೆ. ರಸ್ತೆ ಸಂಚಾರ ಮತ್ತು ಸುರಕ್ಷಾ ನಿಯಮಗಳ ಪಾಲನೆ ಅಗತ್ಯ. ಶಾಂತಿ ಮತ್ತು ಸುವ್ಯವಸ್ಥೆಯಿಂದ ಹಬ್ಬ ಆಚರಿಸಲು ಎಲ್ಲರ ಸಹಕಾರ ಅಗತ್ಯ ಎಂದರು.

ಕಾನೂನು ಸುವ್ಯವಸ್ಥೆ ಉಪನಿರೀಕ್ಷಕ ರಾಮಕೃಷ್ಣ, ಸಮುದಾಯದ ಪ್ರಮುಖರಾದ ಪದ್ಮನಾಭ ಪುಜಾರಿ, ಹಂಝ, ಯೂಸುಫ್, ಸೋಮಶೇಖರ್, ಹಮೀದ್, ಸುದರ್ಶನ ಪಡಿಯಾರ್, ಸುವೈಮಾನ್ ಮಜೀದ್ ಕನ್ಯಾನ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net