ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಜಾಗ ಮಾರಾಟ ವೇಳೆ ರಸ್ತೆಯನ್ನು ತೋರಿಸಿ ಸದ್ಯ ದೊಡ್ಡ ಹೊಂಡ ಮಾಡಿ ರಸ್ತೆಯನ್ನು ಮುಚ್ಚಿದ್ದಾರೆ. ಖಾಸಗಿ ರಸ್ತೆಯಾದರೂ ಅಕ್ಕಪಕ್ಕದ ಮನೆಯವರನ್ನು ನಂಬಿಸಿ ಈಗ ಮೋಸ ಮಾಡುತ್ತಿದ್ದಾರೆ. ಈ ರಸ್ತೆಯ ಕೆಳಗೆ ಎಡಿಬಿ ಯೋಜನೆಯ ಪೈಪ್‌ಲೈನ್ ಹಾಗೂ ವಿದ್ಯುತ್ ಸಂಪರ್ಕದ ಕಂಬಗಳಿದ್ದು, ಬೀದಿ ದೀಪವನ್ನು ಅಳವಡಿಸಲಾಗಿದೆ. ಒಂದು ಭಾಗಕ್ಕೆ ನಗರಸಭೆ ಇಂಟರ್‌ಲಾಕ್ ಅಳವಡಿಸಿ ರಸ್ತೆ ಅಭಿವೃದ್ಧಿ ಮಾಡಿದೆ. ಕಂದಾಯ ಇಲಾಖೆಯ ಆಪ್‌ನಲ್ಲಿ ರಸ್ತೆ ಇರುವುದು ಕಾಣುತ್ತಿದ್ದು, ರಸ್ತೆಯನ್ನು ತೆರವು ಮಾಡಿ ಕೊಡಬೇಕೆಂದು ಆಯುಕ್ತರಿಗೆ ಸ್ಥಳೀಯ ನಿವಾಸಿ ಪತ್ರ ಬರೆದಿದ್ದರು.