ಮುಖ್ಯ ರಸ್ತೆಯ ಪುಟ್‌ಪಾತ್ ಅತಿಕ್ರಮಣ Puttur Problem

ಹೂವಿನ ಮಾರುಕಟ್ಟೆ ಸಮೀಪ ಅಂಗಡಿ ಫಲಕ ಫುಟ್‌ಪಾತ್‌ವರೆಗೂ ವ್ಯಾಪಿಸಿದ ಕಾರಣ ವಾಹನವನ್ನು ಪಾದಚಾರಿಗಳಿಗೆ ಸಮಸ್ಯೆಯಾಗುವ ರೀತಿ ನಿಲ್ಲಿಸಿರುವುದು.
ಹೂವಿನ ಮಾರುಕಟ್ಟೆ ಸಮೀಪ ಅಂಗಡಿ ಫಲಕ ಫುಟ್‌ಪಾತ್‌ವರೆಗೂ ವ್ಯಾಪಿಸಿದ ಕಾರಣ ವಾಹನವನ್ನು ಪಾದಚಾರಿಗಳಿಗೆ ಸಮಸ್ಯೆಯಾಗುವ ರೀತಿ ನಿಲ್ಲಿಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಪುಟ್‌ಪಾತ್ ಮೇಲೆ ವಾಹನಗಳ ದರ್ಬಾರು
  • ದೂರು ನೀಡಿದರೂ ಮೌನಕ್ಕೆ ಶರಣಾದ ಅಧಿಕಾರಿಗಳು
ಪುತ್ತೂರು: ನಗರದ ಮುಖ್ಯ ರಸ್ತೆಯಲ್ಲಿನ ಅಂಗಡಿಗಳು ಪಾರ್ಕಿಂಗ್ ಜಾಗವನ್ನು ವಸ್ತುಗಳ ಹಾಗೂ ದರ ಕಡಿತ ವ್ಯಾಪಾರದ ಪ್ರಚಾರ ಉದ್ದೇಶಕ್ಕೆ ಬಳಸಿಕೊಂಡು, ವಾಹನಗಳು ಫುಟ್‌ಪಾತ್ ಮೇಲೆ ನಿಂತು ಪಾದಾಚಾರಿಗಳಿಗೆ ಸಮಸ್ಯೆಯುಂಟು ಮಾಡುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ.
ಬೊಳುವಾರು - ಗಾಂಧಿಕಟ್ಟೆ - ಬೊಳುವಾರು ಮಧ್ಯ ನಿತ್ಯ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ರಸ್ತೆಯಲ್ಲಿ ಒಂದು ವಾಹನ ನಿಂತರೂ ಉಳಿದ ವಾಹನ ಸಂಚಾರ ಅಸ್ತವ್ಯಸ್ತವಾಗುತ್ತದೆ. ಇಂತಹ ರಸ್ತೆಯಲ್ಲಿ ಕೆಲವು ಪ್ರಭಾವಿಗಳ ಅಂಗಡಿಗಳು ಫಲಕಗಳನ್ನು ಹಾಕಿರುವುದರಿಂದ ಗ್ರಾಹಕರು ರಸ್ತೆಯಲ್ಲಿ, ಫುಟ್‌ಪಾತ್ ಮೇಲೆ ವಾಹನ ನಿಲ್ಲಿಸುವ ಅನಿವಾರ್ಯತೆ ಎದುರಾಗಿದೆ. ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ಚಾಳಿಯಿಂದ ಪಾದಚಾರಿಗಳಿಗೆ, ವಾಹನ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಬಡವರ ತಳ್ಳುಗಾಡಿ, ಗೂಡಂಗಡಿ ಮೇಲೆ ಜೆಸಿಬಿ ನುಗ್ಗಿಸುವ ಅಧಿಕಾರಿ ವರ್ಗ, ಶ್ರೀಮಂತರು ಪಾರ್ಕಿಂಗ್ ಪ್ರದೇಶವನ್ನು ವ್ಯಾಪಾರಕ್ಕೆ ಬಳಸಿ, ಫುಟ್‌ಪಾತ್ ಹಾಗೂ ರಸ್ತೆಯನ್ನೇ ವಾಹನ ನಿಲುಗಡೆ ಸ್ಥಳವಾಗಿ ಪರಿವರ್ತಿಸಿದರೂ ಕಾನೂನು ಪುಸ್ತಕಕ್ಕೇ ಸೀಮಿತವಾಗಿದೆ.

ರಸ್ತೆಯಲ್ಲೇ ನಿಂತು ವ್ಯಾಪಾರ

ಪುತ್ತೂರು ಮುಖ್ಯ ರಸ್ತೆಯ ಕೆಲವು ಭಾಗದಲ್ಲಿ ತರಕಾರಿ ಅಂಗಡಿಗಳು ಫುಟ್‌ಪಾತ್ ಆಕ್ರಮಿಸಿದರೂ ಅಽಕಾರಿಗಳಿಗೆ ಕಾಣಿಸುತ್ತಿಲ್ಲ. ಫುಟ್‌ಪಾತ್ ಮೇಲೆ ಛಾವಣಿ ನಿರ್ಮಾಣ ಮಾಡಿ ರಸ್ತೆಯಲ್ಲೇ ನಿಂತು ವ್ಯಾಪಾರ ನಡೆಸಿದರೂ, ವ್ಯವಸ್ಥೆ ಕುರಾಡಾಗಿ ಕುಳಿತಿದೆ. ಕೆಲವು ಛಾವಣಿಗಳು ಪಾದಚಾರಿಗಳ ತಲೆಗೆ ಗಾಯ ಮಾಡುವಂತಿದ್ದರೂ ಕ್ರಮವಿಲ್ಲ.

ಆಡಳಿತದಲ್ಲಿ ನಿರುತ್ಸಾಹ!

ಪುತ್ತೂರು ನಗರಸಭೆ ಚುನಾಯಿತ ಜನಪ್ರತಿನಿಧಿಗಳ ಅವಧಿ ಪೂರ್ಣಗೊಂಡು ಸದ್ಯ ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿದ್ದಾರೆ. ಈ ಕಾರಣ ಯಾರೂ ಪ್ರಶ್ನೆ ಮಾಡುವವರಿಲ್ಲ ಎಂಬ ಮನಸ್ಥಿತಿಯಲ್ಲಿ ಆಡಳಿತ ವರ್ಗವಿದೆ. ಅಧಿಕಾರಿಗಳಿಗೆ ಕೆಲಸದಲ್ಲಿ ನಿರುತ್ಸಾಹ ಎದ್ದು ಕಾಣುತ್ತಿದ್ದು, ಜನಸಾಮಾನ್ಯರು ಇದರ ಪರಿಣಾಮ ಎದುರಿಸುವಂತಾಗಿದೆ.
"

ವ್ಯಾಪಾರಸ್ಥರೊಬ್ಬರು ಜಾಹೀರಾತು ಫಲಕವನ್ನು ಫುಟ್‌ಪಾತ್ ಪಕ್ಕದಲ್ಲಿ ಹಾಕಿದ್ದು, ಅದರ ಸುತ್ತ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳದ ಕಾರಣ, ಕಬ್ಬಿಣದ ವಸ್ತು ದೇಹಕ್ಕೆ ಗಾಯಗೊಳಿಸಿದೆ. ಈ ಬಗ್ಗೆ ಅಂಗಡಿಯವರಲ್ಲಿ ಪ್ರಶ್ನಿಸಿದರೆ, ಉಡಾಫೆ ಉತ್ತರ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net