ಕ್ಷೇತ್ರದ ಅಭಿವೃದ್ಧಿ ಬಿಜೆಪಿಗೆ ಸಹಿಸಲಾಗುತ್ತಿಲ್ಲ PUTTUR

- ಕಾಂಗ್ರೆಸ್ ವಕ್ತಾರ ರವೀಂದ್ರ ನೆಕ್ಕಿಲು ತಿರುಗೇಟು
Published on: 

ಪುತ್ತೂರು: ಇತಿಹಾಸವನ್ನೇ ತಿರುಚಿ ಸುಳ್ಳನ್ನೇ ಸತ್ಯ ಮಾಡಿದವರು ಬಿಜೆಪಿಯವರು. ಸುಳ್ಳು ಬ್ಯಾನರ್, ಸುಮ್ಮನೆ ತೆಂಗಿನಕಾಯಿ ಒಡೆಯುವ ಕಾರ್ಯ ಪುತ್ತೂರು ಕ್ಷೇತ್ರದಲ್ಲಿ ನಡೆದಿಲ್ಲ. ದಾಖಲೆ ಇದ್ದೇ ಗುದ್ದಲಿಪೂಜೆಗಳನ್ನು ನಡೆಸಲಾಗಿದೆ. ಕ್ಷೇತ್ರದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ ಎಂದು ಕಾಂಗ್ರೆಸ್ ವಕ್ತಾರ ರವೀಂದ್ರ ನೆಕ್ಕಿಲು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತ ಇರುವಾಗ ಸ್ಥಳೀಯಾಡಳಿತ ಚುನಾವಣೆಯನ್ನು ಮಾಡಬಹುದಿತ್ತಲ್ವಾ? ಈಗ ಚುನಾವಣೆ ನಡೆಸಲು ಕಾಂಗ್ರೆಸ್ ಕ್ರಮ ಕೈಗೊಂಡಾಗ ಬಿಜೆಪಿ ಮೈಲೇಜ್ ತೆಗೆದುಕೊಳ್ಳುತ್ತಿದೆ. ಆರ್‌ಆರ್‌ಟಿ ಕಾನೂನು ಸರಳೀಕರಣಗೊಳಿಸಿ ಅಕ್ರಮ-ಸಕ್ರಮ ಕಡತ ವಿಲೇವಾರಿಗೆ ಶಾಸಕರ ಬೇಡಿಕೆಯಂತೆ ಸರ್ಕಾರ ಕ್ರಮ ಕೈಗೊಂಡಿದೆ. ಕುರಿಯ ಗ್ರಾಮದಲ್ಲಿ ನಡೆದ ಘಟನೆಗೆ ಕೋಮು ಬಣ್ಣ ಹಚ್ಚುವುದನ್ನು ಬಿಜೆಪಿ ನಿಲ್ಲಿಸಬೇಕು. ಮೆಸ್ಕಾಂನಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ಸೂಕ್ತ ದಾಖಲೆ ಸಹಿತ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಬಿಜೆಪಿ ಕುಮ್ಮಕ್ಕಿನಿಂದ ದೇವಸ್ಥಾನದಲ್ಲಿಯೂ ರಾಜಕೀಯ ತರಲಾಗುತ್ತಿದೆ. ಶಾಸಕರ ಅಭಿವೃದ್ಧಿ ಕಾರ್ಯಕ್ಕೆ ಕ್ಷೇತ್ರದ ಜನರು ಬೆಂಬಲವಾಗಿ ನಿಲ್ಲುತ್ತಿರುವುದನ್ನು ಸಹಿಸಲಾಗುತ್ತಿಲ್ಲ ಎಂದರು.

ಪ್ರಮುಖರಾದ ನಿಹಾಲ್ ಪಿ.ಶೆಟ್ಟಿ, ಗಿರೀಶ್ ರೈ, ಶರೂನ್ ಸಿಕ್ವೇರಾ ಸಾಮೆತಡ್ಕ, ಬಾಬು ಮರಿಕೆ ಉಪಸ್ಥಿತರಿದ್ದರು.