ಪುತ್ತೂರು: ಅಭಿವೃದ್ಧಿಯನ್ನು ನೋಡಲಾಗದ ಬೆಳ್ತಂಗಡಿ ಶಾಸಕರು ಪುತ್ತೂರು ಶಾಸಕರ ವ್ಯಕ್ತಿತ್ವವನ್ನು ಕುಗ್ಗಿಸುವ ಮಾತುಗಳನ್ನಾಡುತ್ತಿದ್ದಾರೆ. ರಾಜಕಾರಣಿಗೆ ವಯಸ್ಸು, ಅನುಭವಕ್ಕಿಂತ ಮನುಷ್ಯತ್ವ ಮುಖ್ಯವಾಗಿದೆ. ಸಣ್ಣ ಅನುಭವದಿಂದ ಎಲ್ಲವನ್ನೂ ಮಾಡಲು ಸಾಧ್ಯ ಎಂಬುದನ್ನು ಪುತ್ತೂರು ಶಾಸಕರು ಮಾಡಿ ತೋರಿಸಿದ್ದಾರೆ. ಪುತ್ತೂರು ಕ್ಷೇತ್ರದಲ್ಲಿ ಎಲ್ಲ ಸಮುದಾಯವರಿಗೆ ಜಮೀನು ಸೇರಿ ಮೂಲಸೌಕರ್ಯ ಒದಗಿಸಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರಿಯದ ಆದಿವಾಸಿಗಳಿಗೆ ಸಮರ್ಪಕ ಕುಡಿಯುವ ನೀರು, ವಸತಿ ವ್ಯವಸ್ಥೆಯಿಲ್ಲ. ಮೂಲಭೂತ ಸೌಲಭ್ಯಗಳಿಲ್ಲದೆ ಅವರ ಬದುಕು ಅತಂತ್ರವಾಗಿದೆ. ಬೆಳ್ತಂಗಡಿಗೆ ಜನರಿಗೆ ನ್ಯಾಯ ನೀಡಲು ಅಲ್ಲಿನ ಶಾಸಕರಿಂದ ಆಗಿಲ್ಲ. ಉಪ್ಪಿನಂಗಡಿ-ಕಲ್ಲೇರಿ-ಕುಪ್ಪೆಟ್ಟಿ ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಅಭಿವೃದ್ಧಿಯ ವಿಚಾರದಲ್ಲಿ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಕ್ತಾರ ಅಮಳ ರಾಮಚಂದ್ರ, ಪ್ರಮುಖರಾದ ಸಿರಿಲ್ ರೋಡ್ರಿಗಸ್, ರಾಮ ಮೇನಾಲ, ಮಹಾಲಿಂಗ ನಾಯ್ಕ ಉಪಸ್ಥಿತರಿದ್ದರು.