ಹಕೀಂ ಕೂರ್ನಡ್ಕಗೆ ಜೀವಬೆದರಿಕೆ ಆರೋಪ PUTTUR

ಠಾಣೆಗೆ ದೂರು
ಠಾಣೆಗೆ ದೂರು
Published on

ಪ್ರಮುಖ ಮುಖ್ಯಾಂಶಗಳು

  • 9ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಹಕೀಂ ಕೂರ್ನಡ್ಕ ಅವರನ್ನು ತಳ್ಳಾಡಿ, ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದ್ದು, ಉದಯ ಪಾಟಾಳಿ, ಜುನೈದ ಬಿಜಿ, ಇಸಾಕ್ ಸಾಲ್ಮರ, ಬಶೀರ್ ಪರ್ಲಡ್ಕ, ಹಕೀಮ ಬೋಳ್ವಾರು, ಮೋನು ಬಪ್ಪಳಿಗೆ, ನಾಸೀರ್ ಕೊಲ್ಪೆ, ಪ್ರವೀಣ್ ಆಚಾರ್ಯ ಮತ್ತು ಇತರರ ಮೇಲೆ ಪ್ರಕರಣ ದಾಖಲಾಗಿದೆ.

ಕೆಲವು ಆಪಾದನೆಗಳ ಬಗ್ಗೆ ಸ್ಪಷ್ಟನೆ ಕೊಡುವ ಸಲುವಾಗಿ ಹಕೀಂ ಕೂರ್ನಡ್ಕ ಸೆ.೧ರಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಲು  ಬಂದಿದ್ದಾಗ ಅವರನ್ನು ತಳ್ಳಾಡಿ, ಅವ್ಯಾಚವಾಗಿ ನಿಂದಿಸಿ, ಜೀವಬೆದರಿಕೆ ಒಡ್ಡಿದ್ದಾರೆ. ಪ್ರೆಸ್‌ಕ್ಲಬ್ ಒಳಗೆ ಹೋಗಿದ್ದವರನ್ನು ಹೊರಗೆ ಬಾರದಂತೆ ತಡೆದಿದ್ದಾರೆ. ತಳ್ಳಾಟದಿಂದಾದ ಗಾಯವಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಪುತ್ತೂರು ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸುಳ್ಳು ಆರೋಪ?:

ಹಕೀಂ ಕೂರ್ನಡ್ಕ ಪ್ರೆಸ್‌ಕ್ಲಬ್ ಒಳಗೆ ಇರುವಷ್ಟು ಹೊತ್ತು ಬಾಗಿಲುಗಳನ್ನು ಮುಚ್ಚಿ ಪತ್ರಕರ್ತರ ಹೊರತಾಗಿ ಯಾರೊಬ್ಬರನ್ನೂ ಒಳಗೆ ಬಿಟ್ಟಿಲ್ಲ. ಪೊಲೀಸ್ ಅಧಿಕಾರಿಗಳನ್ನು ಮಾತ್ರ ಮಾತುಕತೆಗೆ ಬಿಡಲಾಗಿತ್ತು. ಆದರೂ ಹಲವರ ಮೇಲೆ ಪ್ರಕರಣ ದಾಖಲಾಗಿದೆ. ಪೊಲೀಸ್ ಜೀಪ್‌ನಲ್ಲಿ ಕರೆದುಕೊಂಡ ಹೋದ ಬಳಿಕ ಹಕೀಂ ಕೂರ್ನಡ್ಕ ಲೋ ಬಿಪಿ ಕಾರಣದಿಂದ ಕುಸಿದು ಬಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಸುದ್ದಿ ಹಬ್ಬಿತ್ತು. ಆದರೆ ಈಗ ತಳ್ಳಾಟದಿಂದ ಗಾಯಗೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ ಎಂದು ಹಲವಾರು ಮಂದಿ ಸಂಶಯ ವ್ಯಕ್ತಪಡಿಸಿದ್ದಾರೆ.

ಪ್ರೆಸ್‌ನೋಟ್ ಕೊಟ್ಟಿಲ್ಲ: ದೂರಿನಲ್ಲಿ ಸುದ್ದಿಗೋಷ್ಠಿಗೂ ಮೊದಲು ಪ್ರೆಸ್‌ನೋಟ್ ತಯಾರಿಯ ವಿಚಾರ ದೂರಿನಲ್ಲಿ ಉಲ್ಲೇಖಿಸಿದ್ದು, ಸುದ್ದಿಗೋಷ್ಠಿಯಲ್ಲಿ ಯಾರಿಗೂ ಪ್ರೆಸ್‌ನೋಟ್ ನೀಡಲಾಗಿಲ್ಲ. ಪ್ರಕರಣದಲ್ಲಿ ಸುಳ್ಳು ವಿಚಾರಗಳನ್ನು ಹೇಳಿದ್ದಕ್ಕೆ ಇದು ಇನ್ನೊಂದು ಸಾಕ್ಷ್ಯವಾಗಿದೆ.

ಮಹಜರು ಪ್ರಕ್ರಿಯೆಗೆ ನೋಟಿಸ್ 

ಪ್ರಕರಣದಲ್ಲಿ ಪೊಲೀಸ್ ಇಲಾಖೆ ಮಹಜರು ಪ್ರಕ್ರಿಯೆ ನಡೆಸುವ ನಿಟ್ಟಿನಲ್ಲಿ ಪ್ರೆಸ್‌ಕ್ಲಬ್‌ಗೆ ಗುರುವಾರ ಸಂಜೆ ಪೊಲೀಸರು ನೋಟಿಸ್ ಜಾರಿಗೆ ಮುಂದಾಗಿದ್ದಾರೆ. ದೂರಿನಲ್ಲಿರುವಂತೆ ಘಟನೆ ನಡೆಯದಿರುವ ಹಿನ್ನೆಲೆ, ನೈಜ ವಿಚಾರಗಳ ಬಗ್ಗೆ ಹಿರಿಯ ಅಧಿಕಾರಿಗಳಲ್ಲಿ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆನ್ನಲಾದ ಕಾರಣ ನೋಟಿಸ್ ನೀಡಲಾಗದೆ ಹಿಂದಿರುಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net