ಚಿನ್ನಾಭರಣದ ನೈಜತೆ ಪರಿಶೀಲಿಸಿ Police

ಚಿನ್ನಾಭರಣ ವಿಚಾರವಾಗಿ ಮುಂಜಾಗ್ರತಾ ಕ್ರಮದ ಬಗ್ಗೆ ನಗರ ಠಾಣೆ ಉಪನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿದರು.
ಚಿನ್ನಾಭರಣ ವಿಚಾರವಾಗಿ ಮುಂಜಾಗ್ರತಾ ಕ್ರಮದ ಬಗ್ಗೆ ನಗರ ಠಾಣೆ ಉಪನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ನಗರ ಠಾಣೆ ಉಪನಿರೀಕ್ಷಕ ಆಂಜನೇಯ ರೆಡ್ಡಿ ಕರೆ
ಪುತ್ತೂರು: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ನಕಲಿ ಚಿನ್ನದ ಹಾವಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮದ ಬಗ್ಗೆ ಪೊಲೀಸ್ ಇಲಾಖೆ ನಗರ ಠಾಣೆಯಲ್ಲಿ ಸೋಮವಾರ ಸಭೆ ನಡೆಸಿತು.
ನಗರ ಠಾಣೆ ಉಪನಿರೀಕ್ಷಕ ಆಂಜನೇಯ ರೆಡ್ಡಿ ಮಾತನಾಡಿ, ಜುವೆಲ್ಲರಿಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸುವ ಜತೆಗೆ ಅಡಮಾನ ಮೂಲಕ ಸಾಲ ನೀಡುವ ಸಂಸ್ಥೆಗಳು ಸೂಕ್ತ ತಪಾಸಣೆ ಕೈಗೊಳ್ಳಬೇಕು. ಭದ್ರತಾ ದೃಷ್ಟಿಯಿಂದ ಸಿಸಿ ಕ್ಯಾಮರಾ, ಆಲರಾಂ, ಭದ್ರತಾ ಸಿಬ್ಬಂದಿ ನೇಮಕಕ್ಕೆ ಆದ್ಯತೆ ನೀಡಬೇಕು. ಈಗಾಗಲೇ ನಕಲಿ ಚಿನ್ನ ಅಡವಿಟ್ಟ ಬಗ್ಗೆ ಪ್ರಕರಣ ದಾಖಲಾಗಿರುವ ಕಾರಣ ಚಿನ್ನಾಭರಣದ ನೈಜತೆಯನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಬೇಕು ಎಂದರು.
ನಗರದ ಪ್ರಮುಖ ಜುವೆಲ್ಲರಿ ಮಳಿಗೆ, ವಿವಿಧ ಸಹಕಾರಿ ಸಂಘ, ಬ್ಯಾಂಕ್ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಪೊಲೀಸ್ ಸಹಾಯಕ ಉಪನಿರೀಕ್ಷಕ ಕೃಷ್ಣಪ್ಪ, ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net