ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಪ್ರತಿ ಸವಾಲಿಗೆ ಪಲಾಯನ ನೀತಿ ಅನುಸರಿಸಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸೋಮವಾರ ೧೨ ಗಂಟೆಗೆ ಶಾಸಕರ ಕಚೇರಿಗೆ ಬರಲು ಹಿಂದೇಟು ಹಾಕಿದ್ದಾರೆ.
ಶಾಸಕ ಅಶೋಕ್ ಕುಮಾರ್ ರೈ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ನಾವು ಯಾರಿಗೂ ಚಾಲೆಂಜ್ ಹಾಕಲು ಹೋಗುವುದಿಲ್ಲ. ಹರೀಶ್ ಪೂಂಜ ಅವರಾಗಿಯೇ ನಿಮ್ಮ ಕಚೇರಿಗೆ ಬರ್ತೇನೆ ಎಂದಾಗ ನಾನು ಕರೆದ್ದೇನೆ. ಕಚೇರಿಯಲ್ಲಿ ಮಾಧ್ಯಮದವರ ಸಮ್ಮುಖದಲ್ಲಿ ಮೂರು ವರ್ಷದಲ್ಲಿ ಮಾಡಿರುವಂತಹ ಸಾಧನೆಗಳ ಬಗ್ಗೆ ತಿಳಿಸುವುದಾಗಿ ಹೇಳಿದ್ದೆ. ಆದರೆ ಅವರು ಮಾಧ್ಯಮವೊಂದರ ಮೂಲಕ ಜನಸಾಮಾನ್ಯರ ಮುಂದೆ ಸಾಧನೆಯನ್ನು ಮುಂದಿಡುವುದಾಗಿ ಹೇಳಿದ್ದಾರೆ. ಜನಸಾಮಾನ್ಯರಿಗೆ ನಮ್ಮ ಸಾಧನೆಯನ್ನು ತಿಳಿಸುವ ಅವಶ್ಯಕತೆ ಏನಿದೆ?. ಯಾರ್ಯಾರು ಯಾವ ಯಾವ ಅಭಿವೃದ್ಧಿ ಮಾಡಿದ್ದಾರೆ, ಏನೇನು ಮಾಡಿದ್ದಾರೆಂದು ಜನರಿಗೆ ಗೊತ್ತಿದೆ. ಕಚೇರಿಯಲ್ಲಿ ಎಲ್ಲ ದಾಖಲೆಗಳನ್ನು ಪ್ರಿಂಟ್ ತೆಗೆದು ಇಟ್ಟುಕೊಂಡಿದ್ದು, ಅವರು ನಾನಿರುವಾಗ ಯಾವಾಗ ಬೇಕಾದರೂ ಬರಬಹುದು ಎಂದರು.
ಪುತ್ತೂರು ದೇವಸ್ಥಾನದ ಮಾಸ್ಟರ್ ಪ್ಲ್ಯಾನ್ ಅನುಮೋದನೆಯಾಗಿರುವುದನ್ನು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿಲ್ಲ ಎಂಬ ಕಾರಣಕ್ಕೆ ಪುತ್ತೂರು ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಅಽಕಾರ ಇಲ್ಲದ ಆಯುಕ್ತರು ಅಮಾನತು ಮಾಡಿದ್ದರು. ಈಗ ಅವರೇ ಅಮಾನತು ಆದೇಶ ಹಿಂತೆಗೆದುಕೊಂಡಿದ್ದಾರೆ ಎಂದರು.