ಕೊಲೆ ಪ್ರಕರಣ ಆರೋಪ ಸಾಬೀತು PUTTUR

crime
crime
Published on

ಪುತ್ತೂರು: ಸಂಪ್ಯದ ಗಣೇಶೋತ್ಸವ ಪೆಂಡಾಲ್‌ನಲ್ಲಿ ೨೦೧೯ ಸೆ.೩ರಂದು ನಡೆದಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಕಾರ್ತಿಕ್ ಸುವರ್ಣ ಮೇರ್ಲ ಕೊಲೆ ಪ್ರಕರಣದಲ್ಲಿ ಇಬ್ಬರ ಮೇಲಿನ ಆರೋಪಗಳು ಸಾಬೀತಾಗಿದ್ದು, ಸೆ.೨೨ರಂದು ಪುತ್ತೂರು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಕಟವಾಗಲಿದೆ. 

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ, ಪ್ರಕರಣದಲ್ಲಿ ಕಿರಣ್ ಹಾಗೂ ಪ್ರೀತೇಶ್ ದೋಷಿಗಳು ಎಂದು ಸಾಬೀತಾಗಿದ್ದು ಶಿಕ್ಷೆಯ ಪ್ರಮಾಣವನ್ನು ಸೆ.೨೨ರಂದು ಪ್ರಕಟಿಸುವುದಾಗಿ ತಿಳಿಸಿದರು. 

ಈ ಪ್ರಕರಣದ ಎರಡನೇ ಆರೋಪಿ ಚರಣ್‌ರಾಜ್ ಅವರನ್ನು ೨೦೨೨ ರ ಜೂ.೪ರಂದು ಪೆರ್ಲಂಪಾಡಿಯಲ್ಲಿ ಮತ್ತೊಂದು ತಂಡ ತಲ್ವಾರ್‌ನಿಂದ ಹತ್ಯೆ ಮಾಡಿತ್ತು. 

ಆಶ್ರಯ ನೀಡಿವರ ಖುಲಾಸೆ: ಕಾರ್ತಿಕ್ ಮೇರ್ಲ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಹೋದರರಾದ ಚರಣ್‌ರಾಜ್ ಹಾಗೂ ಕಿರಣ್, ಪ್ರೀತೇಶ್ ಮತ್ತು ಸ್ಟೀವನ್ ಮೊಂತೇರೊ ಎಂಬುವರನ್ನು ಬಂಧಿಸಿದ್ದರು. ಅಪರಾಧಿಗಳಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಸ್ಟೀವನ್ ಮೊಂತೇರೊ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು.

ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ

ಮೂವರು ಪ್ರತ್ಯಕ್ಷದರ್ಶಿಗಳಾದ ಕೇಶವ ಸುವರ್ಣ, ಪವನ್ ಹಾಗೂ ಶ್ರೀಕಾಂತ್ ಅವರ ಸಾಕ್ಷ್ಯ ಆರೋಪ ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದಲ್ಲದೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸೇರಿದಂತೆ ವೈಜ್ಞಾನಿಕ ಸಾಕ್ಷ್ಯಗಳನ್ನು ನ್ಯಾಯಾಲಯ ಪರಿಗಣಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net