ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಥಬೀದಿಯಲ್ಲಿ ಹೆಣ ಸಾಗಿಸುವುದನ್ನು ತಡೆಯಬೇಕು. ದೇವಸ್ಥಾನದ ಆವರಣದಲ್ಲಿ ಕಸ ಎಸೆಯುವುದು, ಮದ್ಯಪಾನ ಮಾಡಿ ಎಲ್ಲೆಂದರಲ್ಲಿ ಬಾಟಲಿ ಬಿಸಾಡುವುದು ಹಾಗೂ ದೇವಸ್ಥಾನದ ಸಮೀಪದಿಂದ ಗೋವುಗಳ ಕಳ್ಳತನ ತಡೆಯಲು ಕ್ರಮ ಕೈಗೊಳ್ಳುವಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂರಕ್ಷಣಾ ಸಮಿತಿ ವ್ಯವಸ್ಥಾಪನಾ ಸಮಿತಿಗೆ ಮನವಿ ಸಲ್ಲಿದೆ. ಈ ಹಿನ್ನೆಲೆಯಲ್ಲಿ ತೋಡಿಗೆ ೪ ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿ, ಬದಿಯಲ್ಲಿ ರಸ್ತೆ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇದರಿಂದ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಹಾಗೂ ರಥಬೀದಿಯಲ್ಲಿ ವಾಹನ ಸಂಚಾರ ತಪ್ಪಲಿದೆ. ದೇವಸ್ಥಾನದ ಜಾಗಕ್ಕೆ ಆವರಣ ಬೇಲಿ ಮಾಡಿ ನಿರ್ಮಿಸಿ ಮೂರು ಗೇಟುಗಳನ್ನು ಹಾಕಲಾಗುವುದು. ಹೊಸದಾಗಿ ನಿರ್ಮಾಣವಾಗಲಿರುವ ರಸ್ತೆಯನ್ನು ಯಾವುದೇ ಕಾರಣಕ್ಕೂ ಸಾರ್ವಜನಿಕ ರಸ್ತೆಯಾಗಿ ನಗರಸಭೆಗೆ ಹಸ್ತಾಂತರಿಸುವ ಉದ್ದೇಶ ಸಮಿತಿಗೆ ಇಲ್ಲ ಎಂದರು.