ಸಭಾಭವನವಿರುವ ಭಾಗದಲ್ಲಾಗಲಿ ಗದ್ದೆ ನಿರ್ಮಾಣ Puttur Temple

ಕಾಪು ಮಾರಿಯಮ್ಮ ದೇವಸ್ಥಾನದ ಕುಮಾರ ಗುರು ತಂತ್ರಿ ನೇತೃತ್ವದಲ್ಲಿ ನಡೆದ ಪ್ರಶ್ನಾಚಿಂತನೆ ಪಟ್ಟಿಯನ್ನು ಶಾಸಕ ಅಶೋಕ್ ಕುಮಾರ್ ರೈ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹಾಗೂ ಸಮಿತಿ ಸದಸ್ಯರಿಗೆ ಹಸ್ತಾಂತರಿಸಿದರು.
ಕಾಪು ಮಾರಿಯಮ್ಮ ದೇವಸ್ಥಾನದ ಕುಮಾರ ಗುರು ತಂತ್ರಿ ನೇತೃತ್ವದಲ್ಲಿ ನಡೆದ ಪ್ರಶ್ನಾಚಿಂತನೆ ಪಟ್ಟಿಯನ್ನು ಶಾಸಕ ಅಶೋಕ್ ಕುಮಾರ್ ರೈ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹಾಗೂ ಸಮಿತಿ ಸದಸ್ಯರಿಗೆ ಹಸ್ತಾಂತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಳೆಯುವ ತೆನೆ ಈಶ್ವರ ದೇವರಿಗೆ ಚಿನ್ನ
  • ಪುತ್ತೂರಲ್ಲಿ ತಾಂಬೂಲ ಪ್ರಶ್ನಾ ಚಿಂತನೆ

ಪುತ್ತೂರು:ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನ, ಅಯ್ಯಪ್ಪ ಗುಡಿ, ನಾಗನ ಗುಡಿ ಮತ್ತು ನವಗ್ರಹ ಗುಡಿ ತೆರವು ಮಾಡುವ ವಿಚಾರದಲ್ಲಿ ಮಂಗಳವಾರ ತಾಂಬೂಲ ಪ್ರಶ್ನಾ ಚಿಂತನೆ ನಡೆಯಿತು.

ಕಾಪುಮಾರಿಯಮ್ಮ ದೇವಸ್ಥಾನದ ಕುಮಾರ ಗುರು ತಂತ್ರಿ ನೇತೃತ್ವದಲ್ಲಿ ಪ್ರಶ್ನಾಚಿಂತನೆ ನಡೆಯಿತು. ಆರೂಢ ರಾಶಿಯಾಗಿ ವೃಶ್ಚಿಕ ಬಂದಿದೆ. ತಾಂಬೂಲ ಸಂಖ್ಯೆ ಆಗಿತ್ತು. ಸಭಾಭವನಇರುವ ಭಾಗದಲ್ಲಿ ಗದ್ದೆ ಮಾಡಿ ಉಳಿದ ಜಾಗದಲ್ಲಿ ಅಭಿವೃದ್ಧಿ ಮಾಡುವ ವಿಚಾರದಲ್ಲಿ ನಿವೃತ್ತ ರಾಶಿ ಬಂದಿಲ್ಲ. ಬಳಿಕ ದೇವಸ್ಥಾನದ ಮುಂಭಾಗದ ಸಂಪೂರ್ಣ ಜಾಗವನ್ನು ಗದ್ದೆಯಾಗಿ ಉಳಿಸಿಕೊಳ್ಳುವ ಸಂಕಲ್ಪ ಮಾಡಿದಾಗ ನಿವೃತ್ತಿ ರಾಶಿಯಾಗಿ ಮೇಷ ಬಂದು ಸಂಪೂರ್ಣ ದೇವರಿಗೆ ಇಷ್ಟವಿದೆ ಎಂದು ತಿಳಿದುಬಂದಿದೆ. ಭಕ್ತರು ವಿವಿಧ ಜಿಜ್ಞಾಸೆಗಳನ್ನು ಮುಂದಿಟ್ಟು ಉತ್ತರ ಪಡೆದುಕೊಂಡರು.

ಸಭಾಭವನವನ್ನುಯಾವ ಉದ್ದೇಶ ಇಟ್ಟುಕೊಂಡು ಮಾಡಲಾಗಿದೆಯೋ, ಅದುವೇ ಬಾಧೆಯಾಗಿ ಪರಿಣಮಿಸಿದೆ. ಆಪತ್ತುಗಳು ಕಂಡು ಬರುತ್ತಿವೆ. ಈಶ್ವರ ದೇವರ ಕ್ರಿಯೆ ಸಭಾಭವನ ಇರುವ ಜಾಗದಲ್ಲಿ ನಡೆಯುತ್ತಿತ್ತು. ಸಾನ್ನಿಧ್ಯಕ್ಕೂ ಸ್ಥಳಕ್ಕೂ ಅವಿನಾಭಾವಸಂಬಂಧವಿದೆ. ಕದಿರು ಕಟ್ಟುವ ವ್ಯವಸ್ಥೆಗೆ ಬೇಕಾದ ವ್ಯವಸ್ಥೆಗಳು ನಡೆಯುತ್ತಿದ್ದ ಸ್ಥಳವಾಗಿದೆ. ಆನೆಯ ಹೆಸರನ್ನು ನೆನಪಿಸುವ ಹೆಸರು ಭೂಮಿಗೆ ಇತ್ತು. ಸಭಾಭವನದ ಸಂಪತ್ತು ದೇವರಿಗೆ ವಿಷದ ಅನುಭವಾಗುತ್ತಿದೆ. ಸಭಾಭವನ ಇಟ್ಟುಕೊಳ್ಳುವ ಮನಸ್ಥಿತಿ ದೇವರಿಗಿಲ್ಲ. ಸಭಾಭವನವನ್ನು ತೆಗೆಯುವುದರಿಂದ ಸಂಪತ್ತು ವ್ಯರ್ಥವಾಗುವುದಿಲ್ಲ. ಜಾಗದಲ್ಲಿ ಬೆಳೆಯುವತೆನೆ ಈಶ್ವರ ದೇವರಿಗೆ ಚಿನ್ನವಾಗಿದೆ ಎಂದು ಪ್ರಶ್ನಾಚಿಂತನೆ ಸಂದರ್ಭ ಕಂಡುಬಂದಿದೆ.

ಅರ್ಚಕವಸಂತ ಕೆದಿಲಾಯ, ಶಾಸಕ ಅಶೋಕ್ ಕುಮಾರ್ ರೈ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಕುಮಾರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ಮಹಾಬಲರೈ ವಳತ್ತಡ್ಕ, ದಿನೇಶ್ ಪಿ.ವಿ.ಕುಲಾಲ್,ಕೃಷ್ಣವೇಣಿ, ನಳಿನಿ ಪಿ.ಶೆಟ್ಟಿ, ಎನ್.ಕೆ.ಜಗನ್ನಿವಾಸ ರಾವ್,ಕೇಶವ ಪ್ರಸಾದ್ ಮುಳಿಯ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ,ವ್ಯವಸ್ಥಾಪಕ ಹರೀಶ್ ಶೆಟ್ಟಿ ಮತ್ತಿತರರಿದ್ದರು.

"

ಭಕ್ತರಲ್ಲಿ ಅಭಿಪ್ರಾಯಗಳನ್ನು ಕೇಳಿಕೊಂಡು ಮುಂದಿನ ಕೆಲಸ ಕಾರ್ಯಗಳನ್ನು ಮಾಡಲಾಗುವುದು. ಹಿಂದಿನ ತಪ್ಪುಗಳು ಮುಂದೆ ನಡೆಯದ ರೀತಿಯಲ್ಲಿ ಎಚ್ಚರ ವಹಿಸಲಾಗುವುದು.

"

ಮಹಾಲಿಂಗೇಶ್ವರ ಸಭಾಭವನ ವಿಚಾರದಲ್ಲಿ ವಿವಿಧ ಸಂದರ್ಭ ನಡೆದ ಪ್ರಶ್ನಾಚಿಂತನೆಗಳಲ್ಲಿ ದೇವರಿಗೆ ಸಮಾಧಾನವಿಲ್ಲ. ಅಂತಿಮವಾಗಿ ದೇವಸ್ಥಾನಕ್ಕೆ ಇಲ್ಲಿಯವರೆಗೆ ಬರದ ದೈವಜ್ಞರಲ್ಲಿ ಪ್ರಶ್ನಾಚಿಂತನೆ ನಡೆಸಲಾಗಿದೆ. ಕಟ್ಟಡ ತೆರವು ಮಾಡಿ, ಗದ್ದೆ ಮಾಡುವ ಕಾರ್ಯ ಮುಂದಿನ ದಿನ ನಡೆಯಲಿದೆ. ಸಾರ್ವಜನಿಕರಲ್ಲಿ ಯಾವುದೇ ರೀತಿಯ ಗೊಂದಲಗಳು ಬೇಡ. ಸಾಧಕ ಬಾಧಕದ ಬಗ್ಗೆ ಸರ್ಕಾರಕ್ಕೆ ಅಗತ್ಯ ವರದಿ ಕಳುಹಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net