ಭಾಷಣದಿಂದ ಏನೂ ಕೊಡುಗೆ ಸಿಕ್ಕಿಲ್ಲ PUTTUR

ಕಿಲ್ಲೆ ಮೈದಾನ ಶ್ರೀ ದೇವತಾ ಸಮಿತಿಯ ೬೯ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯೆ ಮಲ್ಲಿಕಾ ಪಕ್ಕಳ ಚಾಲನೆ ನೀಡಿದರು. ಪ್ರಮುಖರಾದ ಅಭಿಜಿತ್ ಶೆಟ್ಟಿ, ಚಿದಾನಂದ, ಬಿ.ಕಿಟ್ಟಣ್ಣ ಗೌಡ ಉಪಸ್ಥಿತರಿದ್ದರು.
ಕಿಲ್ಲೆ ಮೈದಾನ ಶ್ರೀ ದೇವತಾ ಸಮಿತಿಯ ೬೯ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯೆ ಮಲ್ಲಿಕಾ ಪಕ್ಕಳ ಚಾಲನೆ ನೀಡಿದರು. ಪ್ರಮುಖರಾದ ಅಭಿಜಿತ್ ಶೆಟ್ಟಿ, ಚಿದಾನಂದ, ಬಿ.ಕಿಟ್ಟಣ್ಣ ಗೌಡ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಶೋಕ್ ಕುಮಾರ್ ರೈ ಹೇಳಿಕೆ
  • ಕಿಲ್ಲೆ ಮೈದಾನದ ಸಾರ್ವಜನಿಕ ಗಣೇಶೋತ್ಸವ
ಪುತ್ತೂರು: ಧರ್ಮದ ಬಗ್ಗೆ ಭಾರಿ ಭಾಷಣ ಮಾಡುತ್ತಾರೆ, ಆದರೆ ಏನೂ ಕೊಡುಗೆ ಸಿಕ್ಕಿಲ್ಲ. ರಾಜಕೀಯ ವ್ಯಕ್ತಿಗಳ ಭಾಷಣದಿಂದ ಮನೆ ಉದ್ಧಾರವಾಗಲು ಸಾಧ್ಯವಿಲ್ಲ. ಸರ್ಕಾರಿ ಜಾಗದಲ್ಲಿರುವ ಎಲ್ಲ ದೈವಸ್ಥಾನ, ಮಂದಿರಗಳ, ಪ್ರಾರ್ಥನಾಲಯಗಳನ್ನು ದೇವರ ಹೆಸರಿನಲ್ಲಿ ಮಾಡುವ ಮಹತ್ವಕಾಂಕ್ಷಿ ಯೋಜನೆ ಮಂಗಳೂರು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವಾಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿ ೬೯ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀದೇವತಾ ಸಮಿತಿ ಅಧ್ಯಕ್ಷ ಅಭಿಜಿತ್ ಶೆಟ್ಟಿ ಮಾತನಾಡಿ, ಸೆ.೧೯ರಂದು ಬಾಲ ಗಣಪತಿಯಾಗ ನಡೆಯಲಿದ್ದು, ಪ್ರಾತಕಾಲ ೪.೪೫ಕ್ಕೆ ಎಲ್ಲರೂ ಪಾಲ್ಗೊಳ್ಳುವಂತೆ ವಿನಂತಿಸಿದರು.
ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯೆ ಮಲ್ಲಿಕಾ ಪಕ್ಕಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಕೀಲ ಚಿದಾನಂದ ಬೈಲಾಡಿ, ಸಮಿತಿ ಹಿರಿಯ ಸದಸ್ಯ ಬಿ.ಕಿಟ್ಟಣ್ಣ ಗೌಡ ಉಪಸ್ಥಿತರಿದ್ದರು. ಶ್ರೀ ದೇವತಾ ಸಮಿತಿ ಸದಸ್ಯ ಡಾ.ರಾಜೇಶ್ ಬೆಜ್ಜಂಗಳ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net