

ಪುತ್ತೂರು:ಬಹುವರ್ಷದ ಕನಸಾಗಿದ್ದ ಶಾಶ್ವತ ಹೆಲಿಪ್ಯಾಡ್ ಮೊಟ್ಟೆತ್ತಡ್ಕದಲ್ಲಿ ಎರಡು ವರ್ಷದ ಹಿಂದೆ ನಿರ್ಮಾಣವಾಗಿದ್ದು, ಇತ್ತೀಚಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ವ್ಯವಸ್ಥೆಗೆ ಮಾತ್ರ ಬಳಸಲಾಗಿದ್ದ ಹೆಲಿಪ್ಯಾಡ್ ಮೊದಲ ಬಾರಿ ಗುರುವಾರ ಖಾಸಗಿ ಹೆಲಿಕಾಪ್ಟರ್ ಇಳಿಯುವ ಮೂಲಕ ಸರ್ವರ ಬಳಕೆಗೆ ಮುಕ್ತವಾಗಿದೆ.
ಮೊಟ್ಟೆತ್ತಡ್ಕಗೇರು ಸಂಶೋಧನ ನಿರ್ದೇಶನಾಲಯ ಮುಂಭಾಗದಲ್ಲಿ ೨.೧೭ ಎಕರೆಜಾಗದಲ್ಲಿ ಹೆಲಿಪ್ಯಾಡ್ ರಚನೆಯ ಕಾರ್ಯ ೨೦೨೩ರಲ್ಲಿ ನಡೆದಿದೆ. ಭವಿಷ್ಯದ ದಿನದಲ್ಲಿ ಇದನ್ನು ಶಾಶ್ವತ ಹೆಲಿಪ್ಯಾಡ್ ಆಗಿ ಪರಿವರ್ತಿಸಿ ಪುತ್ತೂರಿಗೆ ಆಗಮಿಸುವ ಗಣ್ಯರಿಗೆ ಇದನ್ನು ಬಳಸಿಕೊಳ್ಳಲು ಅವಕಾಶ ನೀಡುವ ಉದ್ದೇಶ ಇಟ್ಟುಕೊಳ್ಳಲಾಗಿತ್ತು.
ಪುತ್ತೂರಿನಲ್ಲಿಸ್ವರ್ಣೋದ್ಯಮದ ಮಳಿಗೆ ಪ್ರಾರಂಭಿಸುವ ಉದ್ದೇಶದಿಂದ ಸ್ಥಳ ಪರಿಶೀಲನೆಗೆ ಗುರುವಾರ ಭೀಮಾ ಜುವೆಲ್ಲರ್ಸ್ ಎಂ.ಡಿ ವಿಷ್ಣುಶರ್ಮ, ಮ್ಯಾನೇಜರ್ ವಿರೇಂದ್ರ ವೆಂಕಟೇಶ್ ಪುತ್ತೂರಿಗೆ ಆಗಮಿಸಿದ್ದಾರೆ. ಮೊಟ್ಟೆತ್ತಡ್ಕಕ್ಕೆ ಹೆಲಿಪ್ಯಾಡ್ಗೆ ಹೆಲಿಕಾಪ್ಟರ್ಮೂಲಕ ಆಗಮಿಸಿದ್ದು, ಅಲ್ಲಿಂದ ವಾಹನದ ಮೂಲಕ ತೆರಳಿದ್ದಾರೆ.
ನಿಯಮಗಳಂತೆವಿವಿಧ ಇಲಾಖೆಗೆ ಮಾಹಿತಿ ನೀಡಿದ್ದು, ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿತ್ತು. ತುರ್ತು ವೈದ್ಯಕೀಯ ವ್ಯವಸ್ಥೆಗಾಗಿ ಆಂಬುಲೆನ್ಸ್, ಮುನ್ನೆಚ್ಚರಿಕೆ ದೃಷ್ಟಿಯಿಂದ ಅಗ್ನಿಶಾಮಕ ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.
ಮೊಟ್ಟೆತ್ತಡ್ಕದಲ್ಲಿಕೋಟ್ಯಂತರ ರೂಪಾಯ ಅನುದಾನದಲ್ಲಿ ನಿರ್ಮಿಸದ ಹೆಲಿಪ್ಯಾಡ್ಗೆ ಸೂಕ್ತರಕ್ಷಣಾ ವ್ಯವಸ್ಥೆ ಮಾಡಿರಲಿಲ್ಲ. ಈ ಕಾರಣದಿಂದ ಫೆಬ್ರವರಿಮೊದಲ ವಾರದಲ್ಲಿ ಜೆಸಿಬಿ ಓಡಾಡಿದ್ದಲ್ಲದೆ, ಖಾಸಗಿ ವ್ಯಕ್ತಿಗಳು ಇದರ ಒಳಗೆ ಸರ್ಕಾರದ ಯಾವ ಇಲಾಖೆಯ ಒಪ್ಪಿಗೆ ಪಡೆಯದೆ ಮಣ್ಣ ಅದೆಗು ನೀರು ಹಾಕಿ ಹದಗೊಳಿಸಿ, ಕ್ರಿಕೆಟ್ ಪಿಚ್ ಮಾಡಿದ್ದರು. ಇದರ ಜತೆಗೆ ತ್ಯಾಜ್ಯ ಎಸೆಯುವ ಕೇಂದ್ರವಾಗಿ ಪರಿವರ್ತಿಸಿದ್ದರು. ಇದನ್ನು ‘ವಿಜಯವಾಣಿ’ ವರದಿಮಾಡಿದ್ದು, ಬಳಿಕ ಆವರಣಕ್ಕೆ ಕಬ್ಬಿಣದ ಬೇಲಿ ಹಾಗೂ ಗೇಟ್ ನಿರ್ಮಾಣ ಮಾಡಿ ರಕ್ಷಣೆ ಮಾಡುವ ಕಾರ್ಯಕ್ಕೆ ಇಲಾಖೆ ಮುಂದಾಗಿತ್ತು.
ಜಿಲ್ಲಾಡಳಿತಕ್ಕೆಪ್ರತ್ಯೇಕ ಮಾಹಿತಿಯನ್ನು ಕಳುಹಿಸಬೇಕು. ಮೊಟ್ಟೆತ್ತಡ್ಕ ಹೆಲಿ ಪ್ಯಾಡ್ ಲೊಕೋಪಯೋಗಿ ಇಲಾಖೆಯ ಸುಪರ್ದಿಯಲ್ಲಿರುವ ಕಾರಣ ಅಕ್ಷಾಂಶ ರೇಖಾಂಶ ನೀಡುವ ಜತೆಗೆ ಖಾಸಗಿ ಕಾಪ್ಟರ್ ಗೆ ಸುಮಾರು ೮ಸಾವಿರ ರೂ. ಬಾಡಿಗೆ ವಿಽಸಲಾಗುತ್ತದೆ. ಅಗ್ನಿಶಾಮಕ ದಳದ ನಿಯೋಜನೆಗೆ ಸುಮಾರು ೧೧ ಸಾವಿರ ರೂ,ಜಿಲ್ಲಾ ಪೊಲೀಸ್ ವಿಶೇಷ ಘಟಕಕ್ಕೆ ಸುಮಾರು ೯ ಸಾವಿರ ಪಾವತಿಸಿದ್ದಾರೆ.ಆರೋಗ್ಯ ಇಲಾಖೆಯ ವ್ಯವಸ್ಥೆಗೂ ದರ ವಿಧಿಸುವ ಅವಕಾಶಗಳಿದೆ.