ಅಪಾಯದಲ್ಲಿ ಹವ್ಯಕ ಭವನ Puttur

ಹವ್ಯಕ ಭವನದ ಪಕ್ಕದಲ್ಲಿ ನಡೆದ ಕಾಮಗಾರಿಯಿಂದ ಧರೆ ಕುಸಿದಿರುವುದು.
ಹವ್ಯಕ ಭವನದ ಪಕ್ಕದಲ್ಲಿ ನಡೆದ ಕಾಮಗಾರಿಯಿಂದ ಧರೆ ಕುಸಿದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಅವೈಜ್ಞಾನಿಕ ಕಾಮಗಾರಿಯಿಂದ ಕುಸಿಯುವ ಭೀತಿ
ಪುತ್ತೂರು: ಬನ್ನೂರು ಬಲಮುರಿ ಗಣಪತಿ ದೇವಸ್ಥಾನ ಸಮೀಪ ಇರುವ ಹವ್ಯಕ ಭವನದ ಒಂದು ಭಾಗದಲ್ಲಿ ನಡೆಸಲಾದ ಅವೈಜ್ಞಾನಿಕ ಕಾಮಗಾರಿಯಿಂದ ಕಟ್ಟಡ ಅಪಾಯದಲ್ಲಿದ್ದು, ನಿಗದಿಯಾದ ಹಲವು ಕಾರ್ಯಕ್ರಮಗಳು ರದ್ದುಗೊಂಡಿವೆ.
ಹವ್ಯಕ ಭವನದ ತಳಭಾಗದಲ್ಲಿನ ನಿವೇಶನವನ್ನು ಹವ್ಯಕ ಭವನ ಆಡಳಿತ ಮಂಡಳಿ ಖರೀದಿಸಿದ್ದು, ಇದರಲ್ಲಿ ಕೆಲವು ದಿನಗಳಿಂದ ನಡೆಸಿದ ಕಾಮಗಾರಿಯಲ್ಲಿ ಭವನದ ಗೋಡೆಯ ತನಕ ಧರೆಯನ್ನು ಅವೈಜ್ಞಾನಿಕವಾಗಿ ತೆರವು ಮಾಡಲಾಗಿದೆ. ಇದರಿಂದ ಮಣ್ಣು ಸಡಿಲಗೊಂಡು ಕುಸಿತವಾಗಿ ಕಟ್ಟಡ ಅಪಾಯಕ್ಕೊಳಗಾಗಿದೆ. ನಗರಸಭೆ ಅಧಿಕಾರಿಗಳು ಅವೈಜ್ಞಾನಿಕ ಕಾಮಗಾರಿಗಳ ಬಗ್ಗೆ ಸರಿಯಾದ ಪರಿಶೀಲನೆ ನಡೆಸದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net