ಸ್ಪರ್ಧೆ ಮಾಡುವ ಗುಣ ಅಳವಡಿಕೆ PUTTUR

ಡಾ.ಗಿರಿಧರ ಕಜೆ ಸಲಹೆ | ಸೌರಭ ಪ್ರತಿಬಿಂಬ
ಶೈಕ್ಷಣಿಕ ಸಾಧನೆ ಮಾಡಿದ ಪಲ್ಲವ ಪುರಸ್ಕಾರ ನೀಡಿ ಗೌರವಿಸಲಾಯಿತು. ಡಾ.ಗಿರಿಧರ ಕಜೆ,  ಬೆಟ್ಟ ಈಶ್ವರ ಭಟ್, ಈಶ್ವರಿ ಬೇರ್ಕಡವು ಮತ್ತಿತರರಿದ್ದರು.
ಶೈಕ್ಷಣಿಕ ಸಾಧನೆ ಮಾಡಿದ ಪಲ್ಲವ ಪುರಸ್ಕಾರ ನೀಡಿ ಗೌರವಿಸಲಾಯಿತು. ಡಾ.ಗಿರಿಧರ ಕಜೆ, ಬೆಟ್ಟ ಈಶ್ವರ ಭಟ್, ಈಶ್ವರಿ ಬೇರ್ಕಡವು ಮತ್ತಿತರರಿದ್ದರು.
Published on: 

ಪುತ್ತೂರು: ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಪ್ರತಿಬಿಂಬವಾಗಿದ್ದು, ಕಳೆದ ೩೧ ವರ್ಷಗಳಿಂದ ನಡೆಸಲಾಗುತ್ತಿದೆ. ಬಹಮಾನ ಗಳಿಕೆ ಮುಖ್ಯವಾಗಿರದೆ, ಪಾಲ್ಗೊಳ್ಳುವಿಕೆ ಮುಖ್ಯ. ಸ್ಪರ್ಧೆ ಮಾಡುವ ಗುಣವನ್ನು ಜೀವನದಲ್ಲಿ ಅಳವಡಿಸಬೇಕು. ಹೊರರಾಜ್ಯ ಸೇರಿ ೧೩ ಕಡೆ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬೆಂಗಳೂರಿನಲ್ಲಿ ಗ್ರ್ಯಾಂಡ್ -ನಲ್ ನಡೆಯಲಿದೆ ಎಂದು ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಹೇಳಿದರು.

ಬನ್ನೂರು ಹವ್ಯಕ ಭವನದಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ ವತಿಯಿಂದ ಪುತ್ತೂರು ಪ್ರಾಂತ್ಯದ ಹವ್ಯಕ ಪ್ರತಿಭೆಗಳಿಗಾಗಿ ನಡೆಯುವ ಸ್ಪರ್ಧಾ ಸೌರಭ ಪ್ರತಿಬಿಂಬ ಕಾರ್ಯಕ್ರಮ ಸಮಾರೋಪ ಮತ್ತು ಪಲ್ಲವ ಪುರಸ್ಕಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅವನಿ ಕಾಕೇಕೊಚ್ಚಿ ಉದ್ಘಾಟಿಸಿದರು. ವಿವಿಧ ವಿಭಾಗದಲ್ಲಿ ಸ್ವರ್ಧೆಗಳು ನಡೆಯಿತು. ೧೫೦ಕ್ಕೂ ಅಽಕ ಮಂದಿ ಸ್ವರ್ಧೆಯಲ್ಲಿ ಪಾಲ್ಗೊಂಡರು. ನೂಲಿನ ಉಂಡೆ ಬಿಡಿಸುವ ಸ್ಪರ್ಧೆ ಆಕರ್ಷಣೆಯ ಕೇಂದ್ರವಾಗಿತ್ತು. ದಕ್ಷಿಣ ಕನ್ನಡ, ಉಡುಪಿ ಕಾಸರಗೋಡು ಮತ್ತು ಕೊಡಗು ಜಿಲ್ಲೆ ವ್ಯಾಪ್ತಿಯ ಹವ್ಯಕ ಮಹಿಳಾ ವೇದಿಕೆ ಉದ್ಘಾಟನೆಯನ್ನು ಪಾರ್ವತಿ ಗೋಪಾಲಕೃಷ್ಣ ಭಟ್ ಸಾಮೆತ್ತಡ್ಕ ನಡೆಸಿದರು. ಶೈಕ್ಷಣಿಕ ಸಾಧನೆ ಮಾಡಿದ ಪಲ್ಲವ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಹಿರಿಯ ವಕೀಲ ಬೆಟ್ಟ ಈಶ್ವರ ಭಟ್, ಮಾತೃತ್ವಂ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಪ್ರತಿಬಿಂಬ ಕೇಂದ್ರ ಸಂಚಾಲಕ ದೀಪಕ್ ಹೆಗಡೆ ಗೋಳಿಕೈ, ಹವ್ಯಕ ಮಹಾಸಭಾ ನಿರ್ದೇಶಕ ಶಿವಶಂಕರ ಭಟ್ ಬೋನಂತಾಯ ಉಪಸ್ಥಿತರಿದ್ದರು.

ಪ್ರತಿಬಿಂಬ ಪುತ್ತೂರು ಸಂಚಾಲಕ ಶಂಕರ ಭಟ್ ಕಟ್ಟತ್ತಿಲ ಸ್ವಾಗತಿಸಿದರು. ಮುರಳೀಕೃಷ್ಣ ಕುಕ್ಕುಪುಣಿ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಹವ್ಯಕ ಮಹಾಸಭಾ ನಿರ್ದೇಶಕ ಆಚಳ್ಳಿ ರವಿಶಂಕರ ಭಟ್ ವಂದಿಸಿದರು. ವೇಣುಗೋಪಾಲ ಭಟ್ ಮಾಂಬಾಡಿ, ವಿ ಜಿ.ಭಟ್ ನಿರೂಪಿಸಿದರು.