ದರ್ಬೆ ಗಲಾಟೆ ಇನ್ನೊಂದು ವಿಡಿಯೋ ಬಹಿರಂಗ PUTTUR

 ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸಿಸಿ ಕ್ಯಾಮರಾ ದೃಶ್ಯ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸಿಸಿ ಕ್ಯಾಮರಾ ದೃಶ್ಯ
Published on

ಪ್ರಮುಖ ಮುಖ್ಯಾಂಶಗಳು

  • ಅಂಗಡಿ ಹೊರಗಿನ ಹೊಡೆದಾಟದ ದೃಶ್ಯ
ಪುತ್ತೂರು: ದರ್ಬೆ ಘಟನೆಯಲ್ಲಿ ಡಿಜಿಟಲ್ ಸೇವಾ ಕೇಂದ್ರದ ಹೊರಗೆ ಅಂಗಡಿ ಮಾಲೀಕರು ಹಾಗೂ ಗ್ರಾಹಕರ ನಡುವೆ ನಡೆದ ಗಲಾಟೆಯ ಸಿಸಿ ಕ್ಯಾಮರಾ ದೃಶ್ಯಾವಳಿ ತಡವಾಗಿ ವೈರಲ್ ಆಗಿದ್ದು, ಇದು ನೈಜ ವಿಡಿಯೋ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ದರ್ಬೆಯಲ್ಲಿ ಜನ ಸೇರಿ ಲಘು ಲಾಠಿ ಪ್ರಹಾರ ನಡೆದು ಪೊಲೀಸರು ಹಲವರನ್ನು ವಶಕ್ಕೆ ಪಡೆಯುತ್ತಿದ್ದಂತೆ ಅಂಗಡಿ ಮಾಲೀಕರು ಹಲ್ಲೆ ನಡೆಸುವ ಒಂದು ತುಣುಕು ಹಾಗೂ ಜೀಪ್ ಒಳಗಿನಿಂದ ವ್ಯಕ್ತಿಯನ್ನು ಎಳೆದಾಡುವ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಒಂದು ಸಮುದಾಯವನ್ನು ಮಾತ್ರ ಕೇಂದ್ರೀಕರಿಸಲಾಗಿತ್ತು. ಪ್ರಕರಣದ ಗಂಭೀರತೆ ಅರಿತ ಪೊಲೀಸ್ ಇಲಾಖೆ ಅಂಗಡಿಯ ಒಳಗೆ ಏನಾಗಿದೆ ಎಂಬ ಚಿತ್ರವನ್ನು ಬಿಡುಗಡೆ ಮಾಡಿತ್ತು.
ಆದರೂ ರಾಜಕೀಯ ಕೆಸರೆರಚಾಟ ನಡೆದು ಹೊರಗಿನವರಿಗೆ ಪುತ್ತೂರಿನಲ್ಲಿ ಏನೋ ಅಶಾಂತಿ ಘಟಿಸಿದೆ ಎಂಬಂತೆ ಬಿಂಬಿಸಲಾಗಿತ್ತು. ಭಾನುವಾರ ಬೆಳಗ್ಗೆ ಒಳಗಿನ ಘಟನೆಯ ಬಳಿಕ ಹೊರಗೆ ಏನಾಗಿದೆ ಎಂಬುದನ್ನು ಸ್ಪಷ್ಟಪಡಿಸುವ ವಿಡಿಯೋ ತುಣುಕು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋ ನೈಜತೆಯ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಪ್ರಶ್ನಿಸಿದಾಗ ವಿಡಿಯೋ ನೈಜವಾಗಿದ್ದು, ಪುತ್ತೂರು ದರ್ಭೆಯಲ್ಲಿ ಗಲಾಟೆ ನಡೆದ ಅಂಗಡಿಯ ಸಮೀಪದ ಅಂಗಡಿಗೆ ಅಳವಡಿಸಲಾಗಿದ್ದ ಸಿಸಿಟಿವಿಯಿಂದ ತನಿಖೆಯ ಭಾಗವಾಗಿ ಈ ವಿಡಿಯೋವನ್ನು ಸಂಗ್ರಹಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net