ಬೆಳ್ಳಂಬೆಳಗ್ಗೆ ಕಾಡುಕೋಣಗಳ ಸಂಚಾರ PUTTUR

ದರ್ಬೆ ಸಮೀಪದ ಬೈಪಾಸ್ ರಸ್ತೆಯಲ್ಲಿ ಕಾಣಿಸಿಕೊಂಡ ಕಾಡುಕೋಣಗಳು.
ದರ್ಬೆ ಸಮೀಪದ ಬೈಪಾಸ್ ರಸ್ತೆಯಲ್ಲಿ ಕಾಣಿಸಿಕೊಂಡ ಕಾಡುಕೋಣಗಳು.
Published on

ಪ್ರಮುಖ ಮುಖ್ಯಾಂಶಗಳು

  • ಪುತ್ತೂರು ಪೇಟೆಯಲ್ಲಿ ಪ್ರತ್ಯಕ್ಷ
ಪುತ್ತೂರು: ದರ್ಬೆ ಜಂಕ್ಷನ್ ಸಮೀಪದ ಬೈಪಾಸ್ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ಜೋಡಿ ಕಾಡುಕೋಣಗಳು ಸಂಚರಿಸುತ್ತಿರುವುದು ವಾಹನ ಸವಾರರಿಗೆ ಕಂಡಿದೆ. ವಾಹನಗಳ ಬೆಳಕಿಗೆ ವಿಚಲಿತಗೊಂಡ ಕಾಡುಕೋಣಗಳು ರಸ್ತೆಯಲ್ಲಿ ಅತ್ತಿತ್ತ ಸಾಗಿವೆ. ನಂತರ ಯಾರಿಗೂ ಕಂಡಿಲ್ಲ ಎನ್ನಲಾಗಿದೆ.
ಪೇಟೆಯಿಂದ ಮತ್ತೆ ಸ್ವಸ್ಥಾನಕ್ಕೆ ಹಿಂದಿರುಗಿರುವ ಸಾಧ್ಯತೆ ಇದೆ. ಬಲ್ನಾಡು, ಸಂಪ್ಯ ಭಾಗದ ಕಾಡಿನಲ್ಲಿ ಕಾಡುಕೋಣಗಳ ಹಿಂಡು ಇರುವ ಸಾಧ್ಯತೆಯಿದೆ. ಬಳ್ಳೇರಿ ರಕ್ಷಿತಾರಣ್ಯ ಭಾಗದಿಂದ ಬಿರುಮಲೆ ಗುಡ್ಡದ ಮೂಲಕ ಪೇಟೆಗೆ ಬಂದಿರಬಹುದು ಎನ್ನಲಾಗಿದೆ. ಅರಣ್ಯ ಇಲಾಖೆ ನಿಗಾ ಇಟ್ಟಿದ್ದು, ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net