ಸಣ್ಣ ನೀರಾವರಿ ಇಲಾಖೆ ಮೂಲಕ ಕೊಳವೆಬಾವಿ, ಕಿಂಡಿ ಅಣೆಕಟ್ಟು, ತೋಡಿನ ಬದಿಯ ತಡೆಗೋಡೆಗಳ ನಿರ್ಮಾಣಕ್ಕೆ ಅನುದಾನ ತರಿಸಲಾಗಿದೆ. ಕೆರೆ ಅಭಿವೃದ್ಧಿ, ರಸ್ತೆಗಳ ತಡೆಗೋಡೆಗೆ ವಿಶೇಷ ಒತ್ತು ನೀಡಲಾಗಿದೆ. ಅಂಬೇಡ್ಕರ್‌ಭವನ ನಿರ್ಮಾಣಕ್ಕೆ ಅನುದಾನ ತರಲಾಗಿದ್ದು, ಜಾಗ ಕಡಿಮೆ ಇರುವಲ್ಲಿ ಹೊಸ ಜಾಗ ನೀಡಲಾಗುತ್ತಿದೆ. ೬೨೯ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಶೇ.೧೩ರಷ್ಟು ಹಣ ಬಿಡುಗಡೆ ಮಾಡಲಾಗಿದೆ. ೫ ಮಂದಿ ಗುತ್ತಿಗೆದಾರರ ಮೂಲಕ ಕಾಮಗಾರಿಗಳು ನಡೆಯಲಿದೆ ಎಂದರು.