

ಪ್ರಮುಖ ಮುಖ್ಯಾಂಶಗಳು
ಕಬಕ- ವಿಟ್ಲ ಚತುಷ್ಪಥ ರಸ್ತೆಗೆ ಮೊದಲ ಹಂತದಲ್ಲಿ ಹತ್ತು ಕೋಟಿ ರೂ. ಅನುದಾನ ಬರಲಿದೆ. ಹೆದ್ದಾರಿ ಇಲಾಖೆ ನಿರ್ವಹಣೆ ಮಾಡುವಂತೆ ಮನವಿ ಮಾಡಲಾಗಿದೆ. ರಸ್ತೆಯುದ್ದಕ್ಕೂ ಗಿಡ ನೆಡಲಾಗುವುದು, ಬೀದಿ ದೀಪಗಳನ್ನು ಅಳವಡಿಸಲಾಗುವುದು. ಒಂದೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ವಿಟ್ಲ ಸಮುದಾಯ ಆಸ್ಪತ್ರೆ ಹಿಂಭಡ್ತಿಯಾಗುವ ಪ್ರಶ್ನೆಯೇ ಇಲ್ಲ. ಆಸ್ಪತ್ರೆಗೆ ವೈದ್ಯರು, ಸಿಬಂದಿ ಮತ್ತು ಮೂಲಸೌಕರ್ಯ ಹೆಚ್ಚಿಸಲಾಗುವುದು. ಡಯಾಲಿಸೀಸ್ ಕೇಂದ್ರ ವಿಟ್ಲದಲ್ಲಿ ಆರಂಭವಾಗಲಿದೆ.