

ಪ್ರಮುಖ ಮುಖ್ಯಾಂಶಗಳು
ಪುತ್ತೂರು:ಗಾಂಧಿ ಕಟ್ಟೆಯಿಂದ ದರ್ಬೆ ಭಾಗದ ಮುಖ್ಯರಸ್ತೆಗೆ ಅರುಣಾ ಜಂಕ್ಷನ್ನಲ್ಲಿ ಎಪಿಎಂಸಿಮಾರ್ಗ ಸೇರುವ ಕಾರಣ ವಾಹನ ಸಂಚಾರ ನಿತ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂಬ ನಿಟ್ಟಿನಲ್ಲಿ ಸಾಧಕ ಬಾಧಕ ತಿಳಿದುಕೊಳ್ಳಲು ನಗರ ಯೋಜನಾ ಪ್ರಾಧಿಕಾರ ಜಂಕ್ಷನ್ ಅಭಿವೃದ್ಧಿ ನಿಽಯ ಮೂಲಕ ಸರ್ವೇ ಕಾರ್ಯಕ್ಕೆ ಮುಂದಾಗಿದೆ.
ನಗರದಒಳ ಭಾಗದಲ್ಲಿ ಕೆಲವು ರಸ್ತೆಗಳು ಕಿರಿದಾಗಿರುವ ಕಾರಣಕ್ಕೆ ಬಸ್ ಸೇರಿ ಭಾರಿ ವಾಹನಗಳ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ದರ್ಬೆ ಭಾಗದಿಂದ ಆಗಮಿಸುವ ಬಸ್ಗಳುಎಪಿಎಂಸಿ ರಸ್ತೆಗೆ ಅರುಣಾ ಜಂಕ್ಷನ್ನಲ್ಲಿ ತಿರುಗಿನಿಲ್ದಾಣ ತಲುಪುತ್ತವೆ. ಮುಖ್ಯ ರಸ್ತೆಯಲ್ಲಿ ವಾಹನ ತಿರುಗುವ ಸಂದರ್ಭ ಸಂಚಾರ ವ್ಯವಸ್ಥೆ ಹದಗೆಟ್ಟು ಹೋಗುತ್ತಿದೆ. ಪೇಟೆಯ ಮುಖ್ಯ ರಸ್ತೆ ಹಾಗೂ ಎಪಿಎಂಸಿ ರಸ್ತೆ ದ್ವಿಪಥವಿದ್ದರೂ ಜಂಕ್ಷನ್ ಭಾಗದಲ್ಲಿ ಕಿರಿದಾಗಿದೆ.
ಎ.ಪಿ.ಎಂ.ಸಿ.ಗೆ ಕವಲೊಡೆಯುವ ಭಾಗಅವೈಜ್ಞಾನಿಕವಾಗಿದ್ದು, ಗಾಂಧಿಕಟ್ಟೆಯಿಂದ ಆಗಮಿಸುವ ವಾಹನ, ದರ್ಬೆ ಕಡೆಯಿಂದ ಆಗಮಿಸುವ ವಾಹನ, ಎಪಿಎಂಸಿ ಕಡೆಯಿಂದ ಆಗಮಿಸುವ ವಾಹನ ಒಮ್ಮೆಲೆ ನುಗ್ಗುವುದರಿಂದ ನಿತ್ಯ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಸದ್ಯ ಸ್ಥಳೀಯರ ಸಹಕಾರ ಅತ್ಯಂತ ಮಹತ್ವಪೂರ್ಣವಾಗಿದ್ದು, ಈ ಮೂಲಕ ರಸ್ತೆಯಜತೆಗೆ ಜಂಕ್ಷನ್ ಅಭಿವೃದ್ಧಿ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬಹುದಾಗಿದೆ.
ಪೇಟೆಯಹೆಚ್ಚಿನ ಭಾಗದಲ್ಲಿ ಪಾದಚಾರಿಗಳಿಗೆ ಸಂಚರಿಸಲು ಪುಟ್ಪಾತ್ ವ್ಯವಸ್ಥೆಯಿದ್ದರೂಅರುಣಾ ಜಂಕ್ಷನ್ನಲ್ಲಿ ರಸ್ತೆಕಿರಿದಾಗಿರುವ ಕಾರಣಕ್ಕೆ ಇನ್ನೂ ಸರಿಯಾದ ಪುಟ್ಪಾತ್ ನಿರ್ಮಾಣವಾಗಿಲ್ಲ.ವಾಹನಗಳ ದಟ್ಟೆಣೆ ಸಂದರ್ಭ ಎಲ್ಲೆಂದರಲ್ಲಿ ಸವಾರರು ವಾಹನ ಚಲಾವಣೆಗೆ ಮುಂದಾಗುತ್ತಾರೆ. ಇದರಿಂದ ಪಾದಚಾರಿಗಳಿಗೆ ನಡೆದಾಡಲೂ ಆಗದ ಸ್ಥಿತಿ ಈ ಭಾಗದಲ್ಲಿದೆ. ಇದರಿಂದವಾಹನಗಳ ಜತೆಗೆ ಪಾದಾಚಾರಿಗಳೂ ನಿಂತು ನೋಡುವ ಸ್ಥಿತಿಯಿದೆ.
ಅರುಣಾಜಂಕ್ಷನ್ ಪರಿಸರದಲ್ಲಿ ಭೂಮಿ ಲಭ್ಯತೆಯ ಅಧ್ಯಯನ ಮಾಡುವ ನಿಟ್ಟಿನಲ್ಲಿ ಮಂಗಳವಾರ ತಜ್ಞ ಭೂಮಾಪಕರಿಂದ ಭೂ ಸರ್ವೇ ನಡೆಸಲಾಯಿತು.ಈ ಮೂಲಕ ಯೋಜನೆಯ ಸಾಧಕ ಬಾಧಕದ ಬಗ್ಗೆ ಪರಾಮರ್ಶೆ ನಡೆಯಲಿದೆ. ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಸದಸ್ಯರಾದ ನಿಹಾಲ್ ಶೆಟ್ಟಿ, ಲ್ಯಾನ್ಸಿ ಮಸ್ಕರೇನ್ಹಸ್, ಅನ್ವರ್ ಕಾಸಿಂ, ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಕಾರ್ಯದರ್ಶಿ ವೆಂಕಟ್ರಾಜ, ಸದಸ್ಯರಾದ ಪ್ರಮೋದ್ ಕುಮಾರ್, ಆದರ್ಶ ಕದ್ರಿ, ಚೇತನ್, ಸರ್ವೇಯರ್ ರಾಜಶೇಖರ್, ನಗರಸಭಾ ಇಂಜಿನಿಯರ್ ಮನೋಜ್ ಕುಮಾರ್, ನಗರ ವಿನ್ಯಾಸಗಾರ ಅಜೇಯ ಕೃಷ್ಣ ಉಪ್ಪಂಗಳ ಹಾಜರಿದ್ದರು.
ವಾಹನ ಸಂಚಾರ ಸುಗಮಗೊಳಿಸುವ, ದಟ್ಟಣೆ ಕಡಿಮೆ ಮಾಡಿ ಸುರಕ್ಷತೆ ಹೆಚ್ಚಿಸುವ ಮತ್ತು ನಗರ ಸಂಪರ್ಕ ಸುಧಾರಿಸುವ ದೃಷ್ಟಿಯಿಂದ ಪುಡಾ ಸಾಮಾನ್ಯ ನಿಽಯನ್ನು ಬಳಸಿ ಅರುಣಾ ಜಂಕ್ಷನ್ ಅಭಿವೃದ್ಧಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಯೋಜನೆ ಪ್ರಾಥಮಿಕ ಹಂತದಲ್ಲಿದ್ದು, ಸ್ಥಳ ಪರಿಶೀಲನೆಯ ಕೆಲಸ ಮಾತ್ರ ಮಾಡಲಾಗಿದೆ. ಮುಂದಿನ ಹಂತದಲ್ಲಿ ಅಂದಾಜು ಪಟ್ಡಿ, ಅಭಿವೃದ್ಧಿಯ ನೀಲಿನಕ್ಷೆ, ಇಲಾಖಾ ಒಪ್ಪಿಗೆ, ಮಾತುಕತೆ, ಪರಸ್ಪರ ಕೊಡುಕೊಳ್ಳುವಿಕೆ, ಭೂ ಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ.