

ಪ್ರಮುಖ ಮುಖ್ಯಾಂಶಗಳು
ಪುತ್ತೂರು, ಕಡಬ ಸೇರಿ ೧೫ ಶಂಕಿತ ಡೆಂಘೆ ಪ್ರಕರಣಗಳು ಇದ್ದು, ೧೧ ಮಲೇರಿಯಾ ಪ್ರಕರಣಗಳಿವೆ. ಮಲೇರಿಯಾ ಪ್ರಕರಣ ಹೆಚ್ಚಾಗದಂತೆ ಕ್ರಮಕ್ಕೆ ಸಿಬ್ಬಂದಿ ಕ್ರಮ ಕೈಗೊಂಡಿದ್ದು ವಿವಿಧ ಹೊಟೇಲ್‌ಗಳಲ್ಲಿ ಸರಿಯಾದ ಮಾಹಿತಿ ಸಿಕ್ಕಿಲ್ಲ. ಇಲಾಖೆಯಲ್ಲಿ ಮಲೇರಿಯಾ ಪತ್ತೆಗಾಗಿ ರ್‍ಯಾಪಿಡ್ ಟೆಸ್ಟಿಂಗ್ ವ್ಯವಸ್ಥೆ ಇದ್ದು, ತಕ್ಷಣವೇ ಪರೀಕ್ಷೆಯ ಫಲಿತಾಂಶ ಪಡೆಯಲು ಸಾಧ್ಯವಿದೆ. ಸೋಂಕು ಪತ್ತೆಯಾದಲ್ಲಿ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದು ಹಾಗೂ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸುವುದು ಮುಖ್ಯ.
— ಡಾ.ದೀಪಕ್ ರೈ, ತಾಲೂಕು ಆರೋಗ್ಯಾಧಿಕಾರಿ