

ಪ್ರಮುಖ ಮುಖ್ಯಾಂಶಗಳು
ಪುತ್ತೂರು:ಬಿಜೆಪಿ ಪದಾಧಿಕಾರಿಗಳ ನೇಮಕ ಸಂದರ್ಭ ಪುತ್ತಿಲ ಪರಿವಾರದ ಸೂಚನೆಯನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ ಅವರನ್ನು ಶ್ರೀನಿವಾಸ ಕಲ್ಯಾಣೋತ್ಸವದ ಸಂದರ್ಭ ಹೊರದಬ್ಬಿದ ಕಾರ್ಯವಾಗಿದೆ.
ಬಿಜೆಪಿಯಲ್ಲಿಹೆಚ್ಚುವರಿಯಾಗಿ ಪ್ರಧಾನ ಕಾರ್ಯದರ್ಶಿಗಳ ನೇಮಕ ಮಾಡುತ್ತಿದ್ದಂತೆ, ಪುತ್ತಿಲ ಪರಿವಾರದ ಮನೀಷ್ ಕುಲಾಲ್ ಕರೆ ಮಾಡಿ ನಿಲುವು ಕೇಳುವ ಕಾರ್ಯ ಮಾಡಿದ್ದರು. ಎಲ್ಲರೂ ಬಿಜೆಪಿಯಲ್ಲೇ ಇರುವಾಗ ಅಲ್ಲಿಂದ ಹೊರ ಬರುವ ವಿಚಾರವೇಕೆ? ಸಂಘಟನೆ ಪರವಾಗಿ ನಿಲ್ಲುವ ಭರವಸೆಯನ್ನು ಪ್ರಸನ್ನ ಮಾರ್ತ ನೀಡಿದ್ದರು. ಶ್ರೀನಿವಾಸ ಕಲ್ಯಾಣಕ್ಕೆ ಪುತ್ತಿಲ ಪರಿವಾರದವರು ಮಾತ್ರ ಬಂದರೆ ಸಾಕು ಎಂಬ ಮಾತು ಬಂದಿತ್ತು. ಈ ವಿಚಾರವನ್ನು ತಿಳಿದಪುತ್ತಿಲ ಪರಿವಾರದ ಪ್ರಮುಖರು ಕಲ್ಯಾಣೋತ್ಸವಕ್ಕೆ ಬರಲೇ ಬೇಕೆಂದು ಕೇಳಿಕೊಂಡಿದ್ದರು. ಭಾನುವಾರ ರಾತ್ರಿ ಪ್ರಸನ್ನ ಮಾರ್ತ ಪತ್ನಿ ಸಹಿತವಾಗಿ ಹೋಗುವ ಸಂದರ್ಭ ಕಾರ್ಯಕ್ರಮದ ಚಂದ್ರಶೇಖರ ಎಂಬವರು ಒಳಗೆ ಹೋಗಲು ಬಿಡದೆ, ಪ್ರಸನ್ನ ಅವರನ್ನು ದೂಡಿ ಗೇಟನ್ನು ಅವರತ್ತ ತಳ್ಳಿ ತಡೆಯೊಡ್ಡಿದ್ದಾರೆ. ಘಟನೆಯ ಬಳಿಕ ಪರಿವಾರದ ಪ್ರಮುಖರು ಬಂದು ಕರೆದುಕೊಂಡು ಹೋಗಿ ಒಳಗೆ ಕೂರಿಸಿದ್ದಾರೆನ್ನಲಾಗಿದೆ.