ಕಾಮಗಾರಿ ಆರಂಭದಲ್ಲೇ ಕಬ್ಬಿಣದ ಸರಳುಗಳನ್ನು ಸರಿಯಾಗಿ ಕಟ್ಟದಿರುವುದು, ಹಲಗೆಗಳ ನಡುವಿನ ಸೆರೆಯನ್ನು ಕಾಗದ ರಟ್ಟಿನಲ್ಲಿ ಮುಚ್ಚಿರುವುದು ಪತ್ತೆಯಾಗಿತ್ತು. ಇದನ್ನು ಪರಿಶೀಲಿಸಿದ ಪುಡಾ ಅಧಕ್ಷರು ಸರಿಪಡಿಸುವಂತೆ ತಾಕೀತು ಮಾಡಿದ್ದರು. ಆದರೆ ಈಗ ಕಾಮಗಾರಿ ಪೂರ್ಣವಾಗಿದ್ದು, ರಟ್ಟುಗಳನ್ನು ಇಟ್ಟಲ್ಲಿ ಸಿಮೆಂಟ್ ಸೋರಿಕೆಯಾಗಿರುವುದು, ಅಲ್ಲಲ್ಲಿ ಸಿಮೆಂಟ್ ಬಿದ್ದು, ಜಲ್ಲಿ ಕಾಣುತ್ತಿರುವುದು, ಕೊಳಚೆ ನೀರಿನಲ್ಲಿ ಸೋರಿಕೆಯಾದ ಸಿಮೆಂಟ್ ಗಟ್ಟಿಯಾಗಿರುವುದು ಪತ್ತೆಯಾಗಿದೆ. ಇದೆಲ್ಲವನ್ನೂ ಇಂಜಿನಿಯರ್ ಗಮನಕ್ಕೆ ತಂದು ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನಿಸಿದರು.